ಬೆಂಕಿಗೆ ಸೊಳ್ಳೆಬತ್ತಿ ನಾಶ

7

ಬೆಂಕಿಗೆ ಸೊಳ್ಳೆಬತ್ತಿ ನಾಶ

Published:
Updated:

ಹೊಸಕೋಟೆ: ಗೋದಾಮಿನಲ್ಲಿ ಸಂಗ್ರಹವಿದ್ದ ಸೊಳ್ಳೆನಾಶಕ ಬತ್ತಿಗಳ ಪ್ಯಾಕೆಟ್‌ಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಪಟ್ಟಣದ ಕಮ್ಮೇವಾರಿ ನಗರದಲ್ಲಿ ಭಾನುವಾರ ನಡೆದಿದೆ.

ಸೊಳ್ಳೆನಾಶಕ ಬತ್ತಿಗಳ ಪ್ಯಾಕೆಟ್‌ ಪ್ರಕಾಶ ಎನ್ನುವವರಿಗೆ ಸೇರಿದ್ದು, ಅಂದಾಜು ₹37 ಲಕ್ಷ ಹಾನಿಯಾಗಿದೆ. ಭಾನುವಾರ ರಜೆ ಇದ್ದಿದ್ದರಿಂದ ಗೋದಾಮಿಗೆ ಬೀಗ ಹಾಕಲಾಗಿತ್ತು. ಮಧ್ಯಾಹ್ನ ಗೋದಾಮಿನಿಂದ ಹೊಗೆಬರುತ್ತಿರುವುದನ್ನುನೋಡಿದ ಅಲ್ಲಿನ ನಿವಾಸಿಗಳು ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry