‘ಹತ್ತು ಮೋದಿ, ಶಾ ಬಂದರೂ ಸೋಲಿಸಲು ಸಾಧ್ಯವಿಲ್ಲ’

7

‘ಹತ್ತು ಮೋದಿ, ಶಾ ಬಂದರೂ ಸೋಲಿಸಲು ಸಾಧ್ಯವಿಲ್ಲ’

Published:
Updated:

ಬಾದಾಮಿ: ‘ವಿಧಾನಸಭಾ ಮತಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲ್ಲುವುದು ನಿಶ್ಚಿತ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾರಂತಹ ಹತ್ತು ಮಂದಿ ಬಂದರೂ ಸಿದ್ದರಾಮಯ್ಯ ಗೆಲುವನ್ನು ತಡೆಯಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಜಮೀರ್‌ ಅಹ್ಮದ್‌ ಹೇಳಿದರು.

ಹೊಸಗೌಡ್ರ ನಿವೇಶನದಲ್ಲಿ ನಡೆದ ಸಭೆಯಲ್ಲಿ ‘ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಅವರಿಗೆ ಕಡ್ಡಾಯವಾಗಿ ಎಲ್ಲ ಮುಸ್ಲಿಂ ಬಾಂಧವರು ಮತವನ್ನು ಚಲಾಯಿಸಿ ಗೆಲ್ಲಿಸಬೇಕು’ ಎಂದು ಅವರು ವಿನಂತಿಸಿದರು.

‘ನನ್ನ ಹೇಳಿಕೆಯನ್ನು ಮಾಧ್ಯಮದಲ್ಲಿ ತಿರುಚಿ ಹಿಂದೂಗಳ ಬಗ್ಗೆ ಅವಹೇಳನ ಮಾತನಾಡಿದ ಬಗ್ಗೆ ಹರಿಬಿಟ್ಟಿದ್ದಾರೆ. ಇದೆಲ್ಲ ಸತ್ಯಕ್ಕೆ ದೂರವಾಗಿದೆ. ನಾನು ಪಕ್ಕಾ ಹಿಂದುಸ್ಥಾನಿಯಾಗಿದ್ದೇನೆ. ನಾನು ಹೇಗೆ ಹಿಂದೂಗಳ ಬಗ್ಗೆ ಮಾತನಾಡುತ್ತೇನೆ. ಇದೆಲ್ಲ ಬಿಜೆಪಿ ಅಸ್ತ್ರವಾಗಿಸಿಕೊಂಡಿದೆ’ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಎಂ.ಬಿ ಸೌದಾಗರ, ಸಯ್ಯೀದ್‌ ಮುಜಾಹಿದ್ದೀನ್‌ ಪಾಷಾ, ಬಿ.ಬಿ. ಸೂಳಿಕೇರಿ, ಶೌಕತಲಿ ಸೌದಾಗರ, ಫಾರೂಕ್‌ಅಹ್ಮದ್‌ ದೊಡಮನಿ, ಆರ್‌.ಎಫ್‌. ಬಾಗವಾನ, ಶಕೀಲ ನವಾಜ್‌, ಅಜೀಜ್‌ ಬಾಳಿಕಾಯಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry