ಚೈತನ್ಯ ತುಂಬುವ ‘ರಾಜಿ’ ಟೈಟಲ್‌ ಸಾಂಗ್‌

7

ಚೈತನ್ಯ ತುಂಬುವ ‘ರಾಜಿ’ ಟೈಟಲ್‌ ಸಾಂಗ್‌

Published:
Updated:
ಚೈತನ್ಯ ತುಂಬುವ ‘ರಾಜಿ’ ಟೈಟಲ್‌ ಸಾಂಗ್‌

ನವದೆಹಲಿ: ರಾಜಿ ಸಿನಿಮಾದಿಂದ ಹೆಕ್ಕಿ ಮನಮುಟ್ಟುವ ‘ಏ ವತನ್’ ಮತ್ತು ‘ದಿಲ್ಬರೊ’ ಗೀತೆಗಳನ್ನು ಕೊಟ್ಟಿದ್ದ ಸಿನಿತಂಡ, ಈಗ ಚಿತ್ರದ ‘ಅಗರ್‌ ದಿಲ್‌ ರಾಜಿ ಹೈ’ ಟೈಟಲ್‌ ಸಾಂಗ್‌ ಅನ್ನು ಬಿಡುಗಡೆ ಮಾಡಿದೆ. ಈ ಗೀತೆ ಬೇಸರದಲ್ಲಿ ಇರುವವರಲ್ಲಿ ಚೈತನ್ಯ ತುಂಬುವ ಸಾಹಿತ್ಯ, ಸಂಗೀತ ಹೊಂದಿದೆ. 

ಸೆಹಮತ್‌ ಪಾತ್ರಧಾರಿಯಾದ ಅಲಿಯಾ ಗೂಢಚಾರಿಯಾಗಿ ಹೇಗೆ ಬದಲಾಗುತ್ತಾಳೆ. ಅದಕ್ಕಾಗಿ ಹೇಗೆ ತರಬೇತಿ ಪಡೆದುಕೊಳ್ಳುತ್ತಾಳೆ, ಭಾರತದ ಕಣ್ಣು–ಕಿವಿಯಾಗಿ ಪಾಕಿಸ್ತಾನದಲ್ಲಿ ಅಲೆಯಲು ಅಲಿಯಾ ಹೇಗೆ ಸಿದ್ದಳಾಗುತ್ತಾಳೆ. ಅದಕ್ಕಾಗಿ ಎಷ್ಟು ಕಷ್ಟ ಅನುಭವಿಸುತ್ತಾಳೆ ಎಂಬುದರ ಕಥಾನಕ ಈ ಗೀತೆಯಲ್ಲಿದೆ.

ಗುಲ್ಜಾರರ ಈ ಹಾಡಿನ ಸಾಲುಗಳಿಗೆ ಶಂಕರ್‌ ಎಹ್ಸಾನ್‌ ಲಾಯ್‌ ತ್ರಯರು ಸಂಗೀತದ ಜೀವ ತುಂಬಿದ್ದಾರೆ. ಅರ್ಜಿತ್‌ ಸಿಂಗ್‌ರ ಕಂಠ ಕಿವಿಗೆ ಇಂಪೆನಿಸುತ್ತದೆ.

ದೇಶಭಕ್ತಿ ಉದ್ದೇಪಿಸುವ ‘ಏ ವತನ್‌’ ಮತ್ತು ಮದುಮಗಳನ್ನು ಬೀಳ್ಕೊಡುವ ಸನ್ನಿವೇಶದ ‘ದಿಲ್ಬರೊ’ ಹಾಡುಗಳು ಈಗಾಗಲೇ ಜನಮಾನಸದಲ್ಲಿ ಸ್ಥಾನ ಪಡೆದುಕೊಳ್ಳುತ್ತಿವೆ.

ರಾಜಿ ಚಿತ್ರವು, ಭಾರತದ ಗೂಢಾಚಾರಿಯೊಬ್ಬಳು ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಸೇನೆಯ ಮಾಹಿತಿಗಳನ್ನು ಭಾರತಕ್ಕೆ ರವಾನಿಸುವ ಕಥಾಹಂದರ ಒಳಗೊಂಡಿದೆ. ಗೂಢಾಚಾರಿ ಪಾತ್ರದಲ್ಲಿ ಅಲಿಯಾ ಭಟ್‌ ನಟಿಸಿದ್ದಾರೆ. ವಿಕ್ಕಿ ಕೌಶಲ ಸಹ ಇದರಲ್ಲಿದ್ದಾರೆ.

ಹರೀಂಧರ್‌ ಸಿಕ್ಕಾರ ‘ಸೆಹಮತ್‌’ ಕಾದಂಬರಿ ಆಧರಿಸಿ, ಮೇಘನಾ ಗುಲ್ಜಾರ್‌ ನಿರ್ದೇಶನ ಮಾಡಿರುವ ‘ರಾಜಿ’ ಚಿತ್ರಮಂದಿರಗಳಿಗೆ ಮೇ 11ರಂದು ಬರಳಿದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry