ಮುಂದಿನ ಹಂತಕ್ಕೆ ಕಲ್ಯಾಟಂಡ, ನಂದೀರ

7
ಎಫ್‌ಎಂಸಿ ಕಾಲೇಜು ಮೈದಾನದಲ್ಲಿ ‘ಮಡ್ಲಂಡ ಕ್ರಿಕೆಟ್‌ ಕಪ್‌’

ಮುಂದಿನ ಹಂತಕ್ಕೆ ಕಲ್ಯಾಟಂಡ, ನಂದೀರ

Published:
Updated:

ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್‌ನಲ್ಲಿ ಕಲ್ಯಾಟಂಡ, ನಂದೀರ ತಂಡ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದವು.

ಟಾಸ್ ಗೆದ್ದ ನಂದೀರ ತಂಡ ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ಗೆ 99 ರನ್ ಗಳಿಸಿತು. ಬೆನ್ನಟ್ಟಿದ ಅಚ್ಚೆಯಡ ತಂಡ 6 ವಿಕೆಟ್‌ಗೆ 22 ರನ್ ಗಳಿಸಿ ಸೋತಿತು.

ಕಲ್ಯಾಟಂಡ ಹಾಗೂ ಚಂಡೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಂಡೀರ ತಂಡ ನಿಗದಿತ 8 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 112 ರನ್ ಕಲೆ ಹಾಕಿತು. ಕಲ್ಯಾಟಂಡ ತಂಡವು 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಕಲ್ಯಾಟಂಡ ತಂಡದ ಕರಣ್ 60 ರನ್ ಗಳಿಸಿ, ತಂಡದ ಜಯಕ್ಕೆ ನೆರವಾದರು. ನಡಿಕೇರಿಯಂಡ ಹಾಗೂ ಬೊಳ್ಳಜೀರ ನಡುವೆ ನಡೆದ ಪಂದ್ಯದಲ್ಲಿ ಬೊಳ್ಳಜೀರ ತಂಡವು ನಿಗದಿತ ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತು. ನಡಿಕೇರಿಯಂಡ ತಂಡವು 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಚೆನಿಯಪಂಡ ಹಾಗೂ ಮಂಡತಂಡ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಚೆನಿಯಪಂಡ ತಂಡವು ಮೂರು ವಿಕೆಟ್ ಕಳೆದುಕೊಂಡು 106 ರನ್ ದಾಖಲಿಸಿತು. ಗುರಿ ಬೆನ್ನಟ್ಟಿದ ಮಂಡತಂಡ ಮೂರು ವಿಕೆಟ್ ಕಳೆದು ಕೊಂಡು ಜಯ ಗಳಿಸಿತು.

ಕೊಕ್ಕಂಡ ಹಾಗೂ ಮುಕ್ಕಾಟೀರ ನಡುವಣ ಪಂದ್ಯದಲ್ಲಿ ಕೊಕ್ಕಂಡ ತಂಡಕ್ಕೆ 58 ರನ್‌ಗಳ ಗುರಿ ನೀಡಿತು. ಬೆನ್ನಟ್ಟಿದ ಕೊಕ್ಕಂಡ ತಂಡ 6 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಪುಲ್ಲಂಗಡ ಹಾಗೂ ಮೇಕೆರಿರ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪುಲ್ಲಂಗಡ ತಂಡ ನಿಗದಿತ ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿತು. ಮೇಕೆರಿರ ತಂಡ ಒಂದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry