ಚಕ್ಕೇರ, ಅರೆಯಡ, ಮಂಡೇಟಿರಕ್ಕೆ ಜಯ

7
ಕೊಡವ ಕುಟುಂಬಗಳ ‘ಕುಲ್ಲೇಟಿರ ಹಾಕಿ ಉತ್ಸವ’: ಟೈಬ್ರೇಕರ್‌ನಲ್ಲಿ ಕೊಂಗಂಡ ತಂಡಕ್ಕೆ ಭರ್ಜರಿ ಗೆಲುವು

ಚಕ್ಕೇರ, ಅರೆಯಡ, ಮಂಡೇಟಿರಕ್ಕೆ ಜಯ

Published:
Updated:
ಚಕ್ಕೇರ, ಅರೆಯಡ, ಮಂಡೇಟಿರಕ್ಕೆ ಜಯ

ನಾಪೋಕ್ಲು: ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ವರ್ಷದ ‘ಕುಲ್ಲೇಟಿರ ಹಾಕಿ ಉತ್ಸವದಲ್ಲಿ ಮೂಕೊಂಡ, ಕಡೇಮಾಡ, ಚೋಕಿರ, ಕೆಲೇಟ್ಟೀರ, ಚಕ್ಕೇರ, ಅರೆಯಡ, ಮಂಡೇಟಿರ, ಕಳ್ಳೇಂಗಡ, ಐತಿಚಂಡ, ಮಂಡೀರ, ಪಳಂಗಂಡ ತಂಡಗಳು ಗೆದ್ದು, ಮುಂದಿನ ಸುತ್ತಿಗೆ ಪ್ರವೇಶಿಸಿದವು.

ಭಾನುವಾರ ಮೂಕೊಂಡ ತಂಡವು ಕೊಟ್ರಮಾಡ ತಂಡವನ್ನು 5–1 ಗೋಲುಗಳಿಂದ ಮಣಿಸಿತು. ಮೂಕೊಂಡ ತಂಡದ ಪರ ನಿಕೀಲ್ 2, ಮಾಚಯ್ಯ 2, ರೋಷನ್ 1 ಗೋಲು ಗಳಿಸಿದರು. ಕೊಟ್ರಮಾಡ ತಂಡದ ರೋಷನ್ 1 ಗೋಲು ಬಾರಿಸಿದರು.

ನಂತರದ ಪಂದ್ಯದಲ್ಲಿ ಕಡೇಮಡ ತಂಡವು ಕರೋಟಿರ ತಂಡವನ್ನು 3–2 ಗೋಲುಗಳಿಂದ ಸೋಲಿಸಿತು. ಕಡೇಮಾಡ ಪರ ಕುಶಾಲಪ್ಪ 1, ಚೆರ್ಮಾಣ 2 ಗೋಲು ಹೊಡೆದರು. ಕರೋಟೀರ ತಂಡದ ಪರವಾಗಿ ಪೂವಣ್ಣ 1, ಚಿನಗ್ 1 ಗೋಲು ಬಾರಿಸಿದರು.

ಚೋಕಿರ- – ಮುದ್ದಿಯಂಡ ತಂಡಗಳು ನಿಗದಿತ ಅವಧಿಯಲ್ಲಿ ಯಾವುದೇ ಗೋಲು ಗಳಿಸಲಿಲ್ಲ. ನಂತರ ಟೈಬ್ರೇಕರ್‌ನಲ್ಲಿ ಚೋಕಿರ ತಂಡವು ಮುದ್ದಿಯಂಡ ತಂಡವನ್ನು 4–3 ಗೋಲುಗಳಿಂದ ಸೋಲಿಸಿತು.

ಟೈಬ್ರೇಕರ್‌ನಲ್ಲಿ ಕೊಂಗಂಡ ತಂಡವು ಕಳ್ಳಿಚಂಡದ ವಿರುದ್ಧ ಭರ್ಜರಿ ಗೆಲುವು ಪಡೆಯಿತು. ಕೆಲೇಟ್ಟೀರ ಹಾಗೂ ಬೊಳ್ಯಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೆಲ್ಲೇಟ್ಟೀರ ತಂಡವು ಜಯಿಸಿತು.

ನಂತರದ ಪಂದ್ಯ ದಲ್ಲಿ ಚಕ್ಕೇರ ಮತ್ತು ಕುಯ್ಯಿಮಂಡ ತಂಡಗಳ ನಡೆದು ಚಕ್ಕೇರ ತಂಡವು 3–0 ಗೋಲುಗಳಿಂದ ಗೆಲುವು ಸಾಧಿಸಿತು. ಚಕ್ಕೇರ ಪರ ಸೋಮಣ್ಣ, ಬೆಳ್ಯಪ್ಪ, ಆಕರ್ಶ ಒಂದು ಗೋಲು ಹೊಡೆದು ಮಿಂಚಿದರು. ಅರೆಯಡ ತಂಡವು ತೀತಿರ ತಂಡವನ್ನು 3–0 ಗೋಲುಗಳಿಂದ ಮಣಿಸಿತು. ಅರೆಯಡ ಪರ ವಿವಿನ್ ಮುದ್ದಪ್ಪ 1, ಸನ್ನು ಚಿಣ್ಣಪ್ಪ 2 ಗೋಲು ಬಾರಿಸಿದರು.

ಮಂಡೇಟೀರ ತಂಡವು ತೆಕ್ಕಡ ವಿರುದ್ಧ 2–0 ಅಂತರದಲ್ಲಿ ಗೆಲುವು ಸಾಧಿಸಿತು. ಮಂಡೇಟೀರ ಪರ ನಿಹಾಲ್ 1, ವರುಣ್ 1 ಗೋಲು ಹೊಡೆದರು.

ಕಳ್ಳೇಂಗಡ ತಂಡವು ಚೆಯ್ಯಂಡ ತಂಡವನ್ನು 4–1 ಅಂತರದಲ್ಲಿ ಮಣಿಸಿತು. ಕಳೇಂಗಡಪರ ಚಂಗಪ್ಪ 2, ಯಾಶ್ವಿನ್ 1, ಮೊನೀಶ್ 1 ಗೋಲು ಹೊಡೆದು ಮಿಂಚಿದರು; ಚೆಯ್ಯಂಡ ಪರ ನಂದ ನಾಚಪ್ಪ 1 ಗೋಲು ಹೊಡೆದು ಅಂತರ ತಗ್ಗಿಸಿಕೊಂಡರು.

ಐತಿಚಂಡ ತಂಡವು ಚೇನಂಡ ತಂಡವನ್ನು 4–2 ಗೋಲಿನಲ್ಲಿ ಮಣಿಸಿತು. ಐತಿಚಂಡ ಪರ ರಿಕೀನ್ ಉತ್ತಪ್ಪ 1, ಸೋಜನ್ 1, ಪೂವಯ್ಯ 2 ಗೋಲು ಬಾರಿಸಿದರು. ಚೇನಂಡ ಪರ ಮಂದಪ್ಪ 1, ಭರತ್ 1 ಗೋಲು ಹೊಡೆದು ಅಂತರ ತಗ್ಗಿಸಿದರು.

ಮಂಡೀರ ತಂಡವು ತಾಪಂಡದ ವಿರುದ್ಧ ಟೈಬ್ರೇಕರ್‌ನಲ್ಲಿ ವಿಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಪಳಂಗಂಡ ತಂಡವು ಮುಂಡ್ಯೋಳಂಡ ತಂಡವನ್ನು 2–1 ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶ ಪಡೆದು ಕೊಂಡಿತು. ಪಳಂಗಂಡ ಪರ ಅಮರ್ ಅಯ್ಯಮ್ಮ 2 ಗೋಲು ಹೊಡೆದರೆ, ಮುಂಡ್ಯೋಳಂಡ ಪರ ಬೋಪಯ್ಯ 1 ಒಂದು ಗೋಲು ಬಾರಿಸಿದರು.

ಇಂದಿನ ಪಂದ್ಯಗಳು

ಮೈದಾನ 1

ಬೆಳಿಗ್ಗೆ 9ಕ್ಕೆ ಕೋಡಿಮಣಿಯಂಡ – ಕಟ್ಟೇರ

10ಕ್ಕೆ ಬೊಳ್ಳಂಡ – ಐನಂಡ

11ಕ್ಕೆ ಚೌರೀರ(ಹೊದ್ದೂರು) – ಬೊಳ್ಳಚಂಡ

ಮಧ್ಯಾಹ್ನ 12ಕ್ಕೆ ಚೇಪ್ಪುಡೀರ – ಬಾದುಮಂಡ

1ಕ್ಕೆ ಕುಟ್ಟಂಡ (ಅಮ್ಮತ್ತಿ) – ತೀತಿಮಾಡ

ಮೈದಾನ 2

ಬೆಳಿಗ್ಗೆ 9ಕ್ಕೆ ಕರಿನೆರವಂಡ – ಕೊಟ್ಟಂಗಡ

11ಕ್ಕೆ ಶಾಂತೆಯಂಡ   – ಚಿಯಕಪೂವಂಡ

ಮಧ್ಯಾಹ್ನ 12ಕ್ಕೆ ಕಾಯಪಂಡ – ಚೇಂದಿರ

1ಕ್ಕೆ ಸೋಮೆಯಂಡ  – ಮುಕ್ಕಾಟೀರ

2ಕ್ಕೆ ಕುಯಿಮಂಡ  – ತೀತಿಮಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry