ಬಿಗಿ ಭದ್ರತೆಯಲ್ಲಿ ನೀಟ್‌ ಪರೀಕ್ಷೆ

7
9,000 ವಿದ್ಯಾರ್ಥಿಗಳು ಭಾಗಿ

ಬಿಗಿ ಭದ್ರತೆಯಲ್ಲಿ ನೀಟ್‌ ಪರೀಕ್ಷೆ

Published:
Updated:
ಬಿಗಿ ಭದ್ರತೆಯಲ್ಲಿ ನೀಟ್‌ ಪರೀಕ್ಷೆ

ಮಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) 9,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಿಗಿ ಪೊಲೀಸ್‌ ಭದ್ರತೆ ಮತ್ತು ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಿತು.

ಬೆಳಿಗ್ಗೆ 9 ಗಂಟೆಗೂ ಮೊದಲು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಹಾಜರಿದ್ದರು. ಎಲ್ಲ ಕೇಂದ್ರಗಳಲ್ಲೂ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಪರೀಕ್ಷೆ ಮಧ್ಯಾಹ್ನ 1 ಗಂಟೆಗೆ ಮುಗಿಯಿತು.

ಈ ಪರೀಕ್ಷೆಯು ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿತ್ತು.

ನೀಟ್‌ ಪರೀಕ್ಷೆಗಾಗಿ ಎಲ್ಲ ಕೇಂದ್ರಗಳಿಗೂ ಬಿಗಿ ಭದ್ರತೆ ಒದಗಿಸಲಾಗಿತ್ತು. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶನದಂತೆ ಪರೀಕ್ಷಾರ್ಥಿಗಳನ್ನು ತೀವ್ರ ತಪಾಸಣೆಯ ಬಳಿಕ ಒಳಕ್ಕೆ ಬಿಡಲಾಯಿತು. ಕಿವಿ ಓಲೆ, ಮೂಗಿನ ನತ್ತನ್ನೂ ಪರೀಕ್ಷಿಸಲಾಯಿತು. ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry