2018ರ ಗೂಗಲ್‌ ಐ/ಒ ಸಮ್ಮೇಳನದಲ್ಲಿ ಹೊಸ ಉತ್ಪನ್ನಗಳ ನಿರೀಕ್ಷೆ ಏನಿರಬಹುದು?

7

2018ರ ಗೂಗಲ್‌ ಐ/ಒ ಸಮ್ಮೇಳನದಲ್ಲಿ ಹೊಸ ಉತ್ಪನ್ನಗಳ ನಿರೀಕ್ಷೆ ಏನಿರಬಹುದು?

Published:
Updated:
2018ರ ಗೂಗಲ್‌ ಐ/ಒ ಸಮ್ಮೇಳನದಲ್ಲಿ ಹೊಸ ಉತ್ಪನ್ನಗಳ ನಿರೀಕ್ಷೆ ಏನಿರಬಹುದು?

ಕ್ಯಾಲಿಫೋರ್ನಿಯಾ: ಗೂಗಲ್ ಐ/ಒ ಸಮ್ಮೇಳನ ಮೇ 8 ರಿಂದ 10ರ ವರೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿದೆ. ಈ ಬಾರಿಯ ಸಮ್ಮೇಳನದಲ್ಲಿ ಆ್ಯಂಡ್ರಾಯಿಡ್ ಪಿ, ಕ್ರೋಮ್ ಒಎಸ್, ಗೂಗಲ್ ಅಸಿಸ್ಟೆಂಟ್‌ನ ವಿಸ್ತೃತ ಸೇವೆಗಳನ್ನು ಪರಿಚಯಿಸುವ ನಿರೀಕ್ಷೆ ಹೊಂದಲಾಗಿದೆ.

ಗೂಗಲ್ ಐ/ಒ ಸಮ್ಮೇಳನ ಪ್ರತಿ ವರ್ಷ ಮೇ ಅಥವಾ ಜೂನ್ ತಿಂಗಳಲ್ಲಿ ನಡೆಯಲಿದೆ. ಕಂಪನಿಯ ಕೇಂದ್ರ ಕಚೇರಿ ಇರುವ ಕ್ಯಾಲಿಪೋರ್ನಿಯಾದಲ್ಲಿ ಈ ಸಮ್ಮೇಳನ ನಡೆಯಲಿದೆ. ಇದರಲ್ಲಿ ಗೂಗಲ್ ಕಂಪನಿಯ ಹೊಸ ಉತ್ಪನ್ನಗಳು ಹಾಗೂ ನೂತನ ಸೇವೆಗಳನ್ನು ಬಿಡುಗಡೆ ಮಾಡಲಾಗುವುದು. ಈ ಬಾರಿ ಗೂಗಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಂದರ್ ಪಿಚ್ಚೈ 6 ಉತ್ಪನ್ನ ಅಥವಾ ಸೇವೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಆಂಡ್ರಾಯ್ಡ್‌ ಪಿ, ವಿಯರ್ ಒಎಸ್, ಗೂಗಲ್‌ ಲೆನ್ಸ್‌,  ಕ್ರೋಮ್‌ ಓಎಸ್‌, ಗೂಗಲ್‌ ಹೋಮ್, ಗೂಗಲ್‌ ಅಸಿಸ್ಟೆಂಟ್‌ ಮತ್ತು ಎಆರ್‌/ವಿಆರ್‌ ವಿಡಿಯೊಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಅಥವಾ ಹೊಸ ಸೇವೆಗಳನ್ನು ಬಿಡುಗಡೆ ಮಾಡಲಿದೆ. 

ಆ್ಯಂಡ್ರಾಯಿಡ್ ಪಿ...

ಈ ಸಮ್ಮೇಳನದಲ್ಲಿ ಆ್ಯಂಡ್ರಾಯಿಡ್ ಪಿ ಪರಿಚಯಿಸುವ ನಿರೀಕ್ಷೆ ಇದೆ. ಇದು ಆ್ಯಂಡ್ರಾಯಿಡ್ ಮಾದರಿಯಲ್ಲೇ ಉತ್ಕೃಷ್ಟಮಟ್ಟದಾಗಿದ್ದು ಆ್ಯಪ್‌ಗಳ ಅಪ್‌ಡೇಟ್‌ಗೆ ಸಹಕಾರಿಯಾಗಲಿದೆ. ಇದು ಎಲ್ಲಾ ಆ್ಯಂಡ್ರಾಯಿಡ್ ಮಾದರಿಗಳಿಗಿಂತಲೂ ವೇಗವಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ. ಈಗಾಗಲೇ ಇದರ ಪ್ರಾಯೋಗಿಕ ಮಾದರಿಯನ್ನು ಮಾರ್ಚ್‌ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿದೆ.  ಆ್ಯಂಡ್ರಾಯಿಡ್‌ ಪಿ ಬಳಕೆಗೆ 64 ಬಿಟ್‌ ಸ್ಮಾರ್ಟ್‌ಫೋನ್‌ ಇರಬೇಕು ಎಂದು ಹೇಳಲಾಗುತ್ತಿದೆ. 

ವಿಯರ್‌ ಒಎಸ್‌...

ದರಿಸಬಹುದಾದ ಗ್ಯಾಜೆಟ್‌ಗಳಲ್ಲಿ ಹೊಸ ಆಪರೇಟಿಂಗ್ ಸಿಸ್ಟಮ್‌ ಪರಿಚಯಿಸಲು ಗೂಗಲ್ ಚಿಂತಿಸಿದೆ. ಇವುಗಳಲ್ಲಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬದಲಾವಣೆ ಮಾಡಲಾಗುವುದು ಎಂದು ಹೇಳಲಾಗಿದೆ. ಸ್ಮಾರ್ಟ್‌ವಾಚ್‌ಗಳು ಮತ್ತು ರಿಸ್ಟ್‌ ರಿಬ್ಬನ್‌ಗಳಲ್ಲಿ ಹೊಸ ಆ್ಯಂಡ್ರಾಯಿಡ್‌ ವ್ಯವಸ್ಥೆ ಬರುವ ಸಾಧ್ಯತೆಗಳಿವೆ.

ಗೂಗಲ್‌ ಲೆನ್ಸ್‌...

ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ ಗೂಗಲ್ ಲೆನ್ಸ್ ಕೆಲಸ ಮಾಡಲಿದೆ. ಗೂಗಲ್ ಲೆನ್ಸ್  ಬಳಕೆದಾರರು ನೋಡ ಬಯಸುವುದನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ನಿಖರ ಮಾಹಿತಿಯನ್ನು ನೀಡಲಿದೆ.  ಇದು ದೃಷ್ಟಿ ಆಧಾರಿತ ಕಂಪ್ಯೂಟರಿಂಗ್ ತಂತ್ರಜ್ಞಾನವಾಗಿದೆ.  ಸ್ಮಾರ್ಟ್‌ಫೋನ್ ಮೂಲಕ ಫೋಟೋ, ವಿಡಿಯೋ ಅಥವಾ ಲೈವ್ ಫೀಡ್‌ನಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಈಗಾಗಲೇ ಗೂಗಲ್ ಲೆನ್ಸ್‌ 2.0 ಕೆಲಸ ಮಾಡುತ್ತಿದೆ. ಇದಕ್ಕೆ ಪೂರಕವಾಗಿರುವ ಸ್ಮಾರ್ಟ್‌ಫೋನ್‌ ಅನ್ನು ಎಲ್‌.ಜಿ ಕಂಪನಿ ತಯಾರಿಸಿದೆ. ಇದರ ಉನ್ನತೀಕರಣದ ಮಾದರಿಯನ್ನು ಈ ಸಮ್ಮೇಳನದಲ್ಲಿ ಪರಿಚಯಿಸಲಾಗುವುದು.

ಕ್ರೋಮ್‌ ಒಎಸ್‌ ಮತ್ತು ಗೂಗಲ್ ಹೋಮ್‌

ಗೂಗಲ್‌ ಕ್ರೋಮ್‌ನ ಅಪ್‌ಗ್ರೇಡೆಡ್‌ ಮಾದರಿಯೇ ಕ್ರೋಮ್‌ ಒಎಸ್‌. ಆ್ಯಂಡ್ರಾಯಿಡ್ ಟ್ಯಾಬ್‌ಗಳಲ್ಲಿ ಈ ನೂತನ ಮಾದರಿಯನ್ನು ಪರಿಚಯಿಸುವ ಸಾಧ್ಯತೆ ಇದೆ.  ಆ್ಯಂಡ್ರಾಯಿಡ್ ಟ್ಯಾಬ್‌ಗಳನ್ನು ಗಮನದಲ್ಲಿ ಇಟ್ಟುಕೊಂಡು ಕ್ರೋಮ್ ಒಎಸ್‌ ಪರಿಚಯಿಸಲಾಗುತ್ತಿದೆ.  ಗೂಗಲ್‌ನ ಸ್ಮಾರ್ಟ್ ಸ್ಪೀಕರ್‌ನ ವಿಸ್ತೃತ ಮಾದರಿಯನ್ನು ಗೂಗಲ್‌ ಹೋಮ್‌ ಮೂಲಕ ಪರಿಚಯಿಸಲಾಗುತ್ತಿದೆ.   ವಾಯ್ಸ್ ಕಮಾಂಡ್‌ಗಳನ್ನು ಈ ಸ್ಮಾರ್ಟ್ ಸ್ಪೀಕರ್‌ ಆಲಿಸಿ ಉತ್ತರ ನೀಡಲಿವೆ. ಬಳಕೆದಾರರು ಈ ಸ್ಮಾರ್ಟ್ ಸ್ಪೀಕರ್ ಗೆ ಹವಮಾನ ವರದಿ, ವಾರ್ತೆಗಳು, ಸ್ಥಳ, ಆಹಾರ, ತೊಡುಗೆ, ಶಿಕ್ಷಣ  ಕುರಿತ ಮಾಹಿತಿ ಕೇಳಬಹದು. ಆ ಪ್ರಶ್ನೆಗಳಿಗೆ ಸ್ಮಾರ್ಟ್ ಸ್ಪೀಕರ್‌ ಸರಿಯಾದ ಉತ್ತರ ನೀಡಲಿದೆ.

ಗೂಗಲ್‌ ಅಸಿಸ್ಟೆಂಟ್‌ ಮತ್ತು ವಿಆರ್ ವಿಡಿಯೊ

ಎಲ್ಲಾ ಆ್ಯಂಡ್ರಾಯಿಡ್ ಮಾದರಿಗಳಲ್ಲೂ ಕೆಲಸ ಮಾಡುವಂತೆ ಗೂಗಲ್‌ ಅಸಿಸ್ಟೆಂಟ್ ಅನ್ನು ಅಪ್‌ಗ್ರೇಡ್‌ ಮಾಡುವ ನಿರೀಕ್ಷೆ ಇದೆ. ಇದರಲ್ಲಿ ಹೊಸ ಭಾಷೆಗಳ ಸೇರ್ಪಡೆ, ಸ್ಮಾರ್ಟ್‌ಸ್ಪೀಕರ್‌ಗಳ ಅಳವಡಿಕೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಹಾಗೇ ಎಆರ್ ಮತ್ತು ವಿಆರ್‌ ವಿಡಿಯೊ ತಂತ್ರಾಂಶವನ್ನು ಮತ್ತಷ್ಟು ಸುಧಾರಣೆಗೊಳಿಸುವ ಪ್ರಕಟಣೆ ಹೊರ ಬೀಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry