ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲುಗನಸು ಕಾಣುತ್ತಿರುವ ಯಡಿಯೂರಪ್ಪ

ಶರಣಬಸಪ್ಪ ದರ್ಶನಾಪುರ ಪರ ಸಿ.ಎಂ. ಇಬ್ರಾಹಿಂ ಪ್ರಚಾರ
Last Updated 7 ಮೇ 2018, 14:08 IST
ಅಕ್ಷರ ಗಾತ್ರ

ಕೆಂಭಾವಿ: ‘ಯಡಿಯೂರಪ್ಪ ಒಬ್ಬ ಹಗಲು ಕನಸು ಕಾಣುವ ತಲೆತಿರುಕ ವ್ಯಕ್ತಿಯಾಗಿದ್ದು ನಾನೆ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಮೂಲಕ ಅಧಿಕಾರದ ದಾಹದ ಕನಸು ಕಾಣುತ್ತಿದ್ದಾನೆ’ ಎಂದು ಯಡಿಯೂರಪ್ಪ ವಿರುದ್ಧ ಕೇಂದ್ರ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಏಕ ವಚನದಲ್ಲೆ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಭಾನುವಾರ ಶಹಾಪುರ ವಿಧಾನ ಸಭಾ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಸಬಪ್ಪ ದರ್ಶನಾಪುರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಪಕ್ಷ ರಾಜ್ಯದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುವಂತಿದ್ದು 'ಬಸ್ ನಿಲ್ದಾಣದಲ್ಲಿ ಎಲ್ಲ ರೀತಿಯಿಂದ ತಯಾರಾಗಿ ನಿಂತ ಹೆಣ್ಣಿನಂತಿದ್ದು' ಗಿರಾಕಿ ಬಂದ ಕಡೆ ಹೋಗುವ ಜಾಯಮಾನ ಜೆಡಿಎಸ್ ಪಕ್ಷದ್ದಾಗಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 1.20 ಕೋಟಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಪಠ್ಯಪುಸ್ತಕ, ಬಿಸಿಯೂಟ, ಹಾಲು ಉಚಿತ ನೀಡುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ, ರೈತರಿಗೆ ಕೃಷಿ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಕೊಡುಗೆ ನೀಡಿದೆ, 9 ಲಕ್ಷ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡಿದೆ, ಉಚಿತ ಅಕ್ಕಿ ನೀಡುವ ಅನ್ನದಾಸೋಹಕ್ಕೆ ಸರ್ಕಾರ ತನ್ನದೆ ಆದ ಮಹತ್ವ ನೀಡಿದ್ದು ₹ 2.19 ಲಕ್ಷ ಕೋಟಿ ವೆಚ್ಚದ ಬಜೆಟ್ ಮಂಡನೆ ಮಾಡುವ ಮೂಲಕ ರಾಜ್ಯದ ಬಜೆಟ್ ಇತಿಹಾಸದಲ್ಲೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ‘ಸಿದ್ರಮಯ್ಯನವರು ಈ ಭಾಗದ ಬೂದಿಹಾಳ– ಪೀರಾಪುರ ಏತನೀರಾವರಿ ಯೋಜನೆಯಡಿ ನೀರಾವರಿ ಮಾಡುವ ಮೂಲಕ ರೈತರ ಹಿತ ಕಾಪಾಡಿದ್ದಾರೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಬಸಣ್ಣ ಬೂದೂರ, ಸಿದ್ಧನಗೌಡ ಪೊಲೀಸ್ ಪಾಟೀಲ, ವಾಮನರಾವ ದೇಶಪಾಂಡೆ, ಶಂಕ್ರಣ್ಣ ವಣಕ್ಯಾಳ, ಶರಣಪ್ಪ ಸಲಾದಪೂರ, ಬಸರಾಜಪ್ಪಗೌಡ ಬೊಮ್ಮನಹಳ್ಳಿ, ಮಾನಶಪ್ಪ ಕರಡಕಲ್, ಸಲೀಂ ಸಂಗ್ರಾಮ, ಹಣಮಂತ್ರಾಯ ದಳಪತಿ, ಬಸನಗೌಡ ಹೊಸಮನಿ ಯಾಳಗಿ, ಶಶಿಧರ ಮಾಲಿಪಾಟೀಲ, ನೀಲಕಂಠ ಬಡಿಗೇರ, ಇಬ್ರಾಹಿಂ ಶಿರವಾಳ, ಸಂಗನಗೌಡ ಪಾಟೀಲ, ಮಷಾಕ ಸಾಸನೂರ, ಶರಣಬಸ್ಸು ಡಿಗ್ಗಾವಿ ಸೇರಿದಂತೆ ವಲಯದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗನಗೌಡ ಮಾಲಿಪಾಟೀಲ ಸ್ವಾಗತಿಸಿದರು.ಬಸವರಾಜ ಚಿಂಚೋಳಿ ನಿರೂಪಿಸಿದರು ರಂಗಪ್ಪ ವಡ್ಡರ ವಂದಿಸಿದರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT