ರಷ್ಯಾದ ಅಧ್ಯಕ್ಷರಾಗಿ ವ್ಲಾದಿಮಿರ್ ಪುಟಿನ್ ಪ್ರಮಾಣ ವಚನ

7

ರಷ್ಯಾದ ಅಧ್ಯಕ್ಷರಾಗಿ ವ್ಲಾದಿಮಿರ್ ಪುಟಿನ್ ಪ್ರಮಾಣ ವಚನ

Published:
Updated:
ರಷ್ಯಾದ ಅಧ್ಯಕ್ಷರಾಗಿ ವ್ಲಾದಿಮಿರ್ ಪುಟಿನ್ ಪ್ರಮಾಣ ವಚನ

ಮಾಸ್ಕೋ: 18ಕ್ಕೂ ಹೆಚ್ಚು ವರ್ಷಗಳ ಕಾಲ ರಷ್ಯಾದ ಆಡಳಿತ ನಡೆಸಿದ ವ್ಲಾದಿಮಿರ್ ಪುಟಿನ್ ಈ ಬಾರಿಯೂ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ನಾಲ್ಕನೇ ಬಾರಿ ಅಧ್ಯಕ್ಷರಾದ ಖ್ಯಾತಿ ಇವರದಾಗಿದೆ.

ಇಲ್ಲಿನ ಕ್ರೆಮ್ಲಿನ್ ಸಭಾಂಗಣದಲ್ಲಿ ಪ್ರಮಾಣ ವಚನ  ನೆರವೇರಿತು. ಪುಟಿನ್ ಮುಂದಿನ ಆರು ವರ್ಷಗಳ ಕಾಲ ಅಧ್ಯಕ್ಷಗಾದಿಯಲ್ಲಿ ಇರಲಿದ್ದು, 2024ಕ್ಕೆ ಕೊನೆಗೊಳ್ಳಲಿದೆ.

ಎದುರಾಳಿ ಅಲೆಕ್ಸ್ ನವಲ್ನಿರನ್ನು ಸಮರ್ಥವಾಗಿ ಎದುರಿಸಿದ ಪುಟಿನ್ ಶೇ 70ರಷ್ಟು ಮತಗಳಿಕೆಯ ಮೂಲಕ ಭರ್ಜರಿ ವಿಜಯ ಸಾಧಿಸಿದ್ದಾರೆ.

ವಿಜಯ ಮಾಲೆ ಧರಿಸಿರುವ ಪುಟಿನ್ ರಷ್ಯಾದ ಆರ್ಥಿಕತೆಯನ್ನು ಅಭಿವೃದ್ಧಿಯೆಡೆಗೆ ಚಿತ್ತ ನೆಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry