ಕೊಡವ ಹಾಕಿ: ಐನಂಡ ತಂಡಕ್ಕೆ ಗೋಲು

7

ಕೊಡವ ಹಾಕಿ: ಐನಂಡ ತಂಡಕ್ಕೆ ಗೋಲು

Published:
Updated:

ನಾಪೋಕ್ಲು: ಕೋಡಿಮಣಿಯಂಡ ತಂಡ, ಇಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ‘ಕುಲ್ಲೇಟಿರ ಹಾಕಿ ಉತ್ಸವ’ದಲ್ಲಿ ಸೋಮವಾರ ಕಟ್ಟೆರ ತಂಡವನ್ನು 3–0 ಅಂತರದಲ್ಲಿ ಸೋಲಿಸಿತು. ವಿವೇಕ್ ಉತ್ತಪ್ಪ ಎರಡು, ಪೂಣಚ್ಚ ಒಂದು ಗೋಲು ದಾಖಲಿಸಿದರು.

ಟೈಬ್ರೇಕರ್‌ನಲ್ಲಿ ಐನಂಡ ತಂಡವು ಬೊಳ್ಳಂಡ ತಂಡವನ್ನು ಮಣಿಸಿತು. ಚೆಪ್ಪುಡಿರ ತಂಡವು ಬಾದುಮಂಡ ತಂಡವನ್ನು 5–0 ಅಂತರದಲ್ಲಿ ಸೋಲಿಸಿತು.

ಸುಳ್ಳಿಮಾಡ ತಂಡವು ಬಿದ್ದಂಡ ತಂಡವನ್ನು ಟೈಬ್ರೇಕರ್‌ನಲ್ಲಿ 5–4 ಅಂತರದಲ್ಲಿ ಸೋಲಿಸಿತು. ಮಾತಂಡ ತಂಡವು ಮೇಚಿಯಂಡ ತಂಡವನ್ನು (1– 0) ಮಣಿಸಿತು. ಸೋಮೆಯಂಡ ತಂಡವು ಮುಕ್ಕಾಟಿರ ತಂಡವನ್ನು 3–1 ಅಂತರದಲ್ಲಿ ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry