ಚಿಂತಕರು, ಪ್ರಗತಿಪರರು?

7

ಚಿಂತಕರು, ಪ್ರಗತಿಪರರು?

Published:
Updated:

ಇತ್ತೀಚೆಗೆ ಪತ್ರಿಕೆಗಳಲ್ಲಿ ‘ಚಿಂತಕರು, ಪ್ರಗತಿಪರರು’ ಎನ್ನಿಸಿಕೊಂಡವರ ಹೇಳಿಕೆಗಳು ಬರುತ್ತಿವೆ. ಇಂಥ ಪಕ್ಷಕ್ಕೆ ಮತ ಹಾಕಿ, ಕೋಮುವಾದಿಗಳನ್ನು ದೂರವಿಡಿ... ಇತ್ಯಾದಿ. ಈ ಚಿಂತಕರು, ಪ್ರಗತಿ‍ಪರರೆಂದರೆ ಯಾರು? ಅವರಿಗೆ ಆ ಪದವಿಯನ್ನು ಯಾರು ದಯಪಾಲಿಸಿದ್ದು? ಸರ್, ನೈಟ್ ಹುಡ್, ಶಾಸ್ತ್ರಿ, ವಿದ್ವಾನ್ ತರಹದ ಗೌರವವೇ ಅದು? ಅಥವಾ ಆ ಹುದ್ದೆ ಸ್ವಯಂ ಘೋಷಿತವೋ? ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಜನಸಾಮಾನ್ಯರಾದ ನಾವು ಚಿಂತಕರಲ್ಲವೇನೋ ಎಂಬ ಭಾವನೆ ಮೂಡುತ್ತದೆ.

-ಬಿಲ್ಲೇಶ್ವರ ಅಚ್ಚು, ಹುಂಚ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry