ಒರಳಿನ ಮಾಣಿಕ್ಯ...

7

ಒರಳಿನ ಮಾಣಿಕ್ಯ...

Published:
Updated:

‘ಗ್ರೀಕ್ ತತ್ವಜ್ಞಾನದ ಹಂತಗಳು’ (ಪ್ರ.ವಾ., ಪಶ್ಚಿಮದ ಅರಿವು, ಮೇ 5) ಲೇಖನಕ್ಕೆ ಹಾರ್ದಿಕ ಸ್ವಾಗತ. ನೆಲದ ಮರೆಯ ನಿದಾನದಂತಿರುವ ನಮ್ಮ ಹಿಂದಿನ ವಿದ್ವಾಂಸರು ಬರೆದ ಲೇಖನಗಳನ್ನು ನಮ್ಮ ಅರಿವಿಗೆ ತರುವ ಅಮೂಲ್ಯ ಸೇವೆ ಮಾಡಿದ ಹಾರಿತಾನಂದರಿಗೆ ಅಭಿನಂದನೆಗಳು.

ಹೀಗೆ ಪ್ರತಿದಿನ ಇಂಥ ಜ್ಞಾನದ ತುತ್ತನ್ನು ಆಸಕ್ತ ಓದುಗರಿಗೆ ನೀಡಿದರೆ ಬಹಳ ಸಂತೋಷವಾಗುತ್ತದೆ. ಜ್ಞಾನ ಚಿಂತನೆಗಳ ಒಂದು ಲೇಖನ ಮಾಲೆಯೇ ಪ್ರಕಟವಾಗಬೇಕೆಂಬುದು ನನ್ನ ಅನಿಸಿಕೆ.

ಈಗ ಪ್ರಕಟಗೊಳ್ಳುತ್ತಿರುವ ರಾಜಕಾರಣ, ಸಿನಿಮಾ ಮಾಹಿತಿಗಳಿಂದ ತುಂಬಿದ ಕೊಳಚೆಯಲ್ಲಿ ‘ಪಶ್ಚಿಮದ ಅರಿವು’ ಅಂಕಣ ನನಗನಿಸಿದಂತೆ ಒಂದು ‘ಕಮಲ’. ತೌಡು ಕುಟ್ಟುವ ಒರಳಿನಲ್ಲಿ ಒಂದು ಇಂಥ ಮಾಣಿಕ್ಯ ಸಿಕ್ಕರೆ ದಿನವಿಡೀ ಚೈತನ್ಯ ಪ್ರಾಪ್ತಿಯಾದಂತೆ. ವಂದನೆಗಳು.

-ಮಾಲತಿ ಪಟ್ಟಣಶೆಟ್ಟಿ, ಧಾರವಾಡ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry