ವಿಜಯ ಬ್ಯಾಂಕ್: ₹ 207 ಕೋಟಿ ಲಾಭ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್, 2017–18ನೇ ಹಣಕಾಸು ವರ್ಷದ ನಾಲ್ಕನೆ ತ್ರೈಮಾಸಿಕದಲ್ಲಿ ₹ 207.31 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿನ ನಿವ್ವಳ ಲಾಭದ ಪ್ರಮಾಣವು ₹ 203.99 ಕೋಟಿಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ 1.6ರಷ್ಟು ಹೆಚ್ಚಳ ದಾಖಲಾಗಿದೆ. ಒಟ್ಟು ವರಮಾನವು ₹ 3,728 ಕೋಟಿಗಳಷ್ಟಾಗಿದೆ. ಹಣಕಾಸು ವರ್ಷದ ಒಟ್ಟಾರೆ ನಿವ್ವಳ ಲಾಭವು ₹ 750 ಕೋಟಿಗಳಿಂದ ₹ 727 ಕೋಟಿಗಳಿಗೆ (ಶೇ 3.12) ಇಳಿದಿದೆ’ ಎಂದು ಬ್ಯಾಂಕ್ನ ಸಿಇಒ ಆರ್. ಎ. ಶಂಕರ ನಾರಾಯಣನ್ ಅವರು ಹೇಳಿದರು. ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
‘ವಸೂಲಾಗದ ಸಾಲಗಳಿಗಾಗಿ ಬ್ಯಾಂಕ್ ಈ ಬಾರಿ ₹ 552 ಕೋಟಿ ತೆಗೆದು ಇರಿಸಿದೆ. ಹಿಂದಿನ ವರ್ಷ ಈ ಮೊತ್ತವು ₹ 344 ಕೋಟಿಗಳಷ್ಟಿತ್ತು. ಬ್ಯಾಂಕ್ನ ವಸೂಲಾಗದ ಸಾಲದ ಪ್ರಮಾಣವು (ಎನ್ಪಿಎ) ಕಡಿಮೆಯಾಗುತ್ತಿದೆ. ಗೃಹ ಸಾಲ ನೀಡಿಕೆ ಪ್ರಮಾಣವು ಶೇ 30.5 ಮತ್ತು ರಿಟೇಲ್ ಸಾಲ ನೀಡಿಕೆ ಶೇ 25ರಷ್ಟು ಏರಿಕೆ ದಾಖಲಿಸಿದೆ’ ಎಂದರು.
ಒಟ್ಟಾರೆ ವಹಿವಾಟು ಶೇ 20ರಷ್ಟು ಬೆಳವಣಿಗೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ಇದೇ ಬಗೆಯ ವೃದ್ಧಿ ಸಾಧಿಸುವ ನಿರೀಕ್ಷೆ ಹೊಂದಿದೆ.
ಲಾಭಾಂಶ ನೀಡಿಕೆ: ಬ್ಯಾಂಕ್ನ ಪ್ರತಿ ಷೇರಿಗೆ ₹ 1.20ರಂತೆ ಲಾಭಾಂಶ ವಿತರಿಸಲು ಬ್ಯಾಂಕ್ನ ನಿರ್ದೇಶಕ ಮಂಡಳಿ ನಿರ್ಧರಿಸಿದೆ. ಸೋಮವಾರ ಬ್ಯಾಂಕ್ನ ಷೇರಿನ ಬೆಲೆ ₹ 61ರಂತೆ ವಹಿವಾಟು ನಡೆಸಿ ಶೇ 1.92 ಏರಿಕೆ ಕಂಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.