ಹೆಗಲ ಮೇಲೆಯೇ ಪತ್ನಿಯ ಶವ ಹೊತ್ತೊಯ್ದ ಪತಿ

7

ಹೆಗಲ ಮೇಲೆಯೇ ಪತ್ನಿಯ ಶವ ಹೊತ್ತೊಯ್ದ ಪತಿ

Published:
Updated:
ಹೆಗಲ ಮೇಲೆಯೇ ಪತ್ನಿಯ ಶವ ಹೊತ್ತೊಯ್ದ ಪತಿ

ಲಖನೌ: ಆಂಬುಲೆನ್ಸ್‌ ನೀಡಲು ನಿರಾಕರಿಸಿದ ಕಾರಣ ವ್ಯಕ್ತಿಯೊಬ್ಬರು ಪತ್ನಿಯ ಶವವನ್ನು ಹೆಗಲ ಮೇಲೆಯೇ ಹೊತ್ತುಕೊಂಡು ಹೋದ ಅಮಾನವೀಯ ಪ್ರಕರಣ ಉತ್ತರಪ್ರದೇಶದ ಬದಾಯೂ ಜಿಲ್ಲೆಯಲ್ಲಿ ವರದಿಯಾಗಿದೆ.

ಈ ಕುರಿತ ಚಿತ್ರಗಳು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಮಜಹರ ಗ್ರಾಮದ ನಿವಾಸಿಯಾದ ವ್ಯಕ್ತಿಯು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತ್ನಿಯನ್ನು ಸೋಮವಾರ ಬೆಳಿಗ್ಗೆ ಬದಾಯೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅದಾದ ಸ್ವಲ್ಪ ಸಮಯದಲ್ಲಿಯೇ ಅವರ ಪತ್ನಿ ಮೃತಪಟ್ಟರು ಎಂದು ಮಾಧ್ಯಮದ ವರದಿ ತಿಳಿಸಿದೆ.

ಪತ್ನಿಯ ಶವವನ್ನು ನಾಲ್ಕು ಕಿ.ಮೀ ದೂರದ ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಆಂಬುಲೆನ್ಸ್‌ ನೀಡುವಂತೆ ವ್ಯಕ್ತಿಯು ಆಸ್ಪತ್ರೆಯವರಲ್ಲಿ ಮನವಿ ಮಾಡಿದರು. ಆದರೆ, ಆಸ್ಪತ್ರೆ ಸಿಬ್ಬಂದಿ ಇದಕ್ಕೆ ನಿರಾಕರಿಸಿದರು. ಖಾಸಗಿ ವಾಹನದ ಮೂಲಕ ಶವ ಕೊಂಡೊಯ್ಯಲು ಅಶಕ್ತನಾಗಿದ್ದ ವ್ಯಕ್ತಿ, ಅಂತಿಮವಾಗಿ ಹೆಗಲ ಮೇಲೆಯೇ ಹೊತ್ತುಕೊಂಡು ಹೋಗಲು ನಿರ್ಧರಿಸಿದರು ಎಂದು ವರದಿ ಹೇಳಿದೆ.

‘ಘಟನೆ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry