ಅಕ್ರಮ ಗಳಿಕೆಯ ಹಣ ನಕ್ಸಲರ ಮಕ್ಕಳ ಶಿಕ್ಷಣಕ್ಕೆ!

7

ಅಕ್ರಮ ಗಳಿಕೆಯ ಹಣ ನಕ್ಸಲರ ಮಕ್ಕಳ ಶಿಕ್ಷಣಕ್ಕೆ!

Published:
Updated:
ಅಕ್ರಮ ಗಳಿಕೆಯ ಹಣ ನಕ್ಸಲರ ಮಕ್ಕಳ ಶಿಕ್ಷಣಕ್ಕೆ!

ನವದೆಹಲಿ: ಬಿಹಾರ ಮತ್ತು ಜಾರ್ಖಂಡ್‌ ರಾಜ್ಯಗಳ ನಕ್ಸಲರು ಅಕ್ರಮವಾಗಿ ಗಳಿಸಿದ ಹಣವನ್ನು ತಮ್ಮ ಮಕ್ಕಳ ಮತ್ತು ಸಂಬಂಧಿಕರ ಶಿಕ್ಷಣ ಮತ್ತಿತರ ಕಾರ್ಯಗಳಿಗೆ ವೆಚ್ಚ ಮಾಡುತ್ತಿದ್ದಾರೆ ಎಂದು ಸರ್ಕಾರಿ ದಾಖಲೆಗಳಲ್ಲಿ ಪ್ರಕಟಿಸಲಾಗಿದೆ.

ಈ ದಾಖಲೆಗಳನ್ನು ಕೇಂದ್ರ ಗೃಹ ಸಚಿವಾಲಯ ಸಿದ್ಧಪಡಿಸಿದೆ. ಮಾವೋವಾದಿ ಗುಂಪುಗಳು ಮತ್ತು ಅವುಗಳ ಪರವಾಗಿ ಇರುವವರ ವಿರುದ್ಧ ಕಾರ್ಯಾಚರಣೆ ನಡೆಸಲು ಪ್ರತ್ಯೇಕ ವಿಭಾಗ ರಚಿಸುವಂತೆ ಈಚೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಅನುಮತಿ ನೀಡಿತ್ತು. ಇದರ ನಂತರ ಈ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ.

ಹಿರಿಯ ನಕ್ಸಲ್‌ ನಾಯಕ ಪ್ರದ್ಯುಮ್ನ ಶರ್ಮಾ ತನ್ನ ಸೋದರಿಯ ಮಗ ವೈದ್ಯಕೀಯ ಕಾಲೇಜಿಗೆ ದಾಖಲಾಗಲು ₹22 ಲಕ್ಷ ನೀಡಿರುವುದು ಮತ್ತು ಇನ್ನೊಬ್ಬ ನಕ್ಸಲೈಟ್‌ ಅರವಿಂದ್ ಯಾದವ್ ತನ್ನ ಸೋದರನ ಎಂಜಿನಿಯರಿಂಗ್‌ ಕಾಲೇಜು ಪ್ರವೇಶಾತಿಗೆ ₹12 ಲಕ್ಷ ಕೊಟ್ಟಿರುವುದನ್ನು ದಾಖಲೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಸಂದೀಪ್‌ ಯಾದವ್ ಎಂಬ ಇನ್ನೊಬ್ಬ ನಕ್ಸಲ್‌ ತನ್ನ ಮಗಳ ಎಂಜಿನಿಯರಿಂಗ್ ಶಿಕ್ಷಣಕ್ಕೆ ₹15 ಲಕ್ಷ ಕಳುಹಿಸಿದ್ದಾನೆ.

ಈ ಮೂವರು ನಕ್ಸಲರು ಬಿಹಾರ–ಜಾರ್ಖಂಡ್ ವಿಶೇಷ ಪ್ರದೇಶ ಸಮಿತಿಯ ಸದಸ್ಯರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry