ರಾಜ್ಯ ತಂಡಕ್ಕೆ ಆದಿತ್ಯ ನಾಯಕ

7

ರಾಜ್ಯ ತಂಡಕ್ಕೆ ಆದಿತ್ಯ ನಾಯಕ

Published:
Updated:

ಬೆಂಗಳೂರು: ಕ್ಯಾಸ್ಪಿಯನ್‌ ಕ್ಲಬ್‌ನ ಆಟಗಾರ ಎ.ಆದಿತ್ಯ ಅವರು 11ನೇ ಫೆಡರೇಷನ್‌ ಕಪ್‌ ಬೇಸ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ಬೇಸ್‌ಬಾಲ್‌ ಸಂಸ್ಥೆ ಸೋಮವಾರ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಿ.ಎಂ.ವಿನಯ್‌ ಕುಮಾರ್‌ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಫೆಡರೇಷನ್‌ ಕಪ್‌, ಮೇ 11ರಿಂದ 13ರವರೆಗೆ ಚಂಡೀಗಡದಲ್ಲಿ ಜರುಗಲಿದೆ.

ತಂಡ ಇಂತಿದೆ: ಎ.ಆದಿತ್ಯ (ನಾಯಕ), ಬಿ.ಎಂ.ವಿನಯ್‌ ಕುಮಾರ್‌ (ಉಪ ನಾಯಕ), ಎಸ್‌.ಯಶಸ್‌, ಎಸ್‌.ಕಾರ್ತಿಕ್‌, ವಿ.ಮೋಹನ್‌, ಎಂ.ಮೋಹನ್‌ ಕುಮಾರ್‌, ಎಸ್‌.ಸುಹಾಸ್‌, ಫೈಜನ್‌ ಖಾನ್‌, ಪ್ರತೀಕ್‌ ಭಾರದ್ವಾಜ್‌, ಬಿ.ಎಸ್‌.ಸುಮೀತ್‌, ಮಹಮ್ಮದ್‌ ಪರ್ವೇಜ್‌, ಪಿ.ದರ್ಶನ್‌, ಎಂ.ಪ್ರಶಾಂತ್‌, ವಿ.ಮಿಥಿಲೇಶ್‌, ಕೆ.ದಿನೇಶ್‌ ರೆಡ್ಡಿ ಮತ್ತು ವೈ.ಎಸ್‌.ಸಾಕ್ಷಿ ನಂದನ್‌.

ಕೋಚ್‌: ಪಿ.ಗೋಪಿನಾಥ್‌, ಮ್ಯಾನೇಜರ್‌: ಎನ್‌.ನಾಗರಾಜ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry