‘ಮುಂದಿನ ವರ್ಷಗಳಲ್ಲಿ ನೇಮರ್‌ ಶ್ರೇಷ್ಠ ಆಟಗಾರ ಆಗಲಿದ್ದಾರೆ’

7

‘ಮುಂದಿನ ವರ್ಷಗಳಲ್ಲಿ ನೇಮರ್‌ ಶ್ರೇಷ್ಠ ಆಟಗಾರ ಆಗಲಿದ್ದಾರೆ’

Published:
Updated:
‘ಮುಂದಿನ ವರ್ಷಗಳಲ್ಲಿ ನೇಮರ್‌ ಶ್ರೇಷ್ಠ ಆಟಗಾರ ಆಗಲಿದ್ದಾರೆ’

ನವದೆಹಲಿ: ‘ಬ್ರೆಜಿಲ್‌ನ ಪ್ರಮುಖ ಆಟಗಾರ ನೇಮರ್‌ ಅವರು ಮುಂದಿನ ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಜಗತ್ತಿನ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಾಗಬಹುದು’ ಎಂದು ಬ್ರೆಜಿಲ್‌ ತಂಡದ ಆಟಗಾರ ಮಾರ್ಕೊ ವೆರಾಟ್ಟಿ ಹೇಳಿದ್ದಾರೆ.

‘ಸದ್ಯ ಫುಟ್‌ಬಾಲ್‌ ಜಗತ್ತಿನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಯೊನೆಲ್‌ ಮೆಸ್ಸಿ ಅವರು ಶ್ರೇಷ್ಠ ಆಟಗಾರರು. ಆದರೆ, ನೇಮರ್‌ ಅವರಿಬ್ಬರಿಗಿಂತ ಐದು ವರ್ಷ ಚಿಕ್ಕವರು. ಜೊತೆಗೆ, ತಾವೊಬ್ಬ ಪ್ರಮುಖ ಆಟಗಾರ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ವರ್ಷದ ಶ್ರೇಷ್ಠ ಆಟಗಾರರಿಗೆ ಕೊಡುವ ಬ್ಯಾಲನ್‌ ಡಿ ಓರ್‌ ಗೌರವ ಸ್ವೀಕರಿಸುವ ಎಲ್ಲ ಅರ್ಹತೆ ನೇಮರ್‌ಗೆ ಇದೆ’ ಎಂದು ಪ್ಯಾರಿಸ್ ಸೆಂಟ್‌ ಜರ್ಮೈನ್‌ ತಂಡದ ಮಿಡ್‌ಫೀಲ್ಡರ್‌ ಕೂಡ ಆಗಿರುವ ಮಾರ್ಕೊ ಹೇಳಿದ್ದಾರೆ.

‘ಒಬ್ಬ ಉತ್ತಮ ಫುಟ್‌ಬಾಲ್‌ ಆಟಗಾರನಿಗೆ ಇರಬೇಕಾದ ಎಲ್ಲ ರೀತಿಯ ಕೌಶಲ ನೇಮರ್‌ ಅವರಲ್ಲಿದೆ. ಪ್ಯಾರಿಸ್‌ ಸೆಂಟ್‌ ಜರ್ಮೈನ್‌ ತಂಡದಲ್ಲಿ ಅವರೊಂದಿಗೆ ಆಡುವುದು ಸಂತಸದ ಸಂಗತಿ. ಬಲಗಾಲಿನ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಈಗ ಗುಣಮುಖರಾಗುತ್ತಿದ್ದಾರೆ. ಅವರು ಮತ್ತೆ ಅಂಗಳಕ್ಕೆ ಮರಳುವುದನ್ನು ನಾವೆಲ್ಲ ಎದುರು ನೋಡುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry