ಪ್ಯಾರಿಸ್: ಸ್ಪೇನ್ನ ರಫೆಲ್ ನಡಾಲ್, ಸೋಮವಾರ ಪ್ರಕಟವಾಗಿರುವ ಪುರುಷರ ಸಿಂಗಲ್ಸ್ ವಿಭಾಗದ ನೂತನ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ನಡಾಲ್ ಖಾತೆಯಲ್ಲಿ ಒಟ್ಟು 8,770 ಪಾಯಿಂಟ್ಸ್ಗಳಿವೆ.
ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ನಾಲ್ಕನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದು, ಕ್ರೊವೇಷ್ಯಾದ ಮರಿನ್ ಸಿಲಿಕ್ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಮಹಿಳಾ ವಿಭಾಗದಲ್ಲಿ ಸಿಮೊನಾ ಹಲೆಪ್ ಅಗ್ರಸ್ಥಾನದಲ್ಲಿದ್ದಾರೆ.