7

‘ಏರೊಪ್ಲೇನ್ ಮೋಡ್‌ನಲ್ಲಿ ಮೋದಿ’

Published:
Updated:
‘ಏರೊಪ್ಲೇನ್ ಮೋಡ್‌ನಲ್ಲಿ ಮೋದಿ’

ಹೊಸಕೋಟೆ: ‘ಪ್ರಧಾನಿ ಮೋದಿ ಅವರ ಮೊಬೈಲ್‌ ಯಾವಾಗಲೂ ಸ್ಪೀಕರ್‌ ಮೋಡ್‌ ಮತ್ತು ಏರೊಪ್ಲೇನ್‌ ಮೋಡ್‌ನಲ್ಲಿಯೇ ಇರುತ್ತದೆ. ವರ್ಕ್ ಮೋಡ್‌ನಲ್ಲಿ ಎಂದೂ ಇರುವುದಿಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಕುಟುಕಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೊಬೈಲ್‌ನಲ್ಲಿ ಸ್ಪೀಕರ್‌, ಏರೊಪ್ಲೇನ್‌ ಮತ್ತು ವರ್ಕ್‌ ಮೋಡ್‌ ಇರುತ್ತವೆ’ ಎಂದು ಹೇಳುತ್ತಾ ಮೊಬೈಲ್‌ ಕಾರ್ಯವೈಖರಿಯನ್ನು ಮೋದಿಯವರ ಕೆಲಸಕ್ಕೆ ಹೋಲಿಸಿದರು.

ಆರ್‌ಎಸ್‌ಎಸ್‌ಗೆ ದಲಿತರ ಮಾತು ಎಂದಿಗೂ ಅರ್ಥವಾಗುವುದೇ ಇಲ್ಲ. ದೇಶದಲ್ಲಿ ದಲಿತ ಮೇಲೆ ಸಾಲು ಸಾಲು ಹಲ್ಲೆಗಳಾಗುತ್ತಿವೆ. ಆದರೆ, ಆರ್‌ಎಸ್‌ಎಸ್‌ರನವರಾಗಲಿ,  ಮೋದಿ ಅವರಾಗಲಿ ಈ ಬಗ್ಗೆ ಏನೂ ಮಾತನಾಡುವುದಿಲ್ಲ. ಅತ್ಯಂತ ಭ್ರಷ್ಟರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ  ರೆಡ್ಡಿ ಸೋದರರನ್ನು ರಕ್ಷಿಸುತ್ತಿರುವುದು ಏಕೆ ಎಂಬ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಬಿಜೆಪಿ ಸಾಧನೆಗೆ ಬಗ್ಗೆ  ಹೇಳಿಕೊಳ್ಳಲು ಅವರ ಬಳಿ ಏನೂ ಇಲ್ಲ. ಹೀಗಾಗಿ ಮೋದಿ, ಭಾಷಣದಲ್ಲಿ ನನ್ನ ಬಗ್ಗೆ ತಮಾಷೆ ಮಾಡುತ್ತಾರೆ. ಸುಳ್ಳು ಹೇಳುತ್ತಾರೆ’ ಎಂದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry