ವಿಶ್ವ ಇಲೆವನ್: ರಾಂಕಿ, ಮೆಕ್‌ಲೆಂಘಾನ್‌ಗೆ ಸ್ಥಾನ

ದುಬೈ: ನ್ಯೂಜಿಲೆಂಡ್‌ನ ಲೂಕ್ ರಾಂಕಿ ಮತ್ತು ಮಿಚೆಲ್ ಮೆಕ್‌ಲೆಂಘಾನ್ ಅವರು ಐಸಿಸಿ ವಿಶ್ವ ಇಲೆವನ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ನಿಧಿ ಸಂಗ್ರಹಕ್ಕಾಗಿ ಇದೇ ತಿಂಗಳ 31ರಂದು ವೆಸ್ಟ್ ಇಂಡೀಸ್ ಮತ್ತು ವಿಶ್ವ ಇಲೆವನ್ ನಡುವೆ ಪಂದ್ಯ ನಡೆಯಲಿದೆ.
ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತದ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್, ಪಾಕಿಸ್ತಾನದ ಶಾಹಿದ್ ಅಫ್ರಿದಿ ಮತ್ತು ಶೊಯೆಬ್ ಮಲಿಕ್, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮತ್ತು ತಮೀಮ್ ಇಕ್ಬಾಲ್, ಶ್ರೀಲಂಕಾದ ತಿಸಾರ ಪೆರೇರ ಮತ್ತು ಅಫ್ಗಾನಿಸ್ತಾನದ ರಶೀದ್ ಖಾನ್ ತಂಡದಲ್ಲಿ ಆಡಲು ಈಗಾಗಲೇ ಒಪ್ಪಿಕೊಂಡಿದ್ದರು.
‘ವಿವಿಧ ದೇಶಗಳ ಉತ್ತಮ ಆಟಗಾರರನ್ನು ಹೊಂದಿರುವ ತಂಡವೊಂದನ್ನು ಮುನ್ನಡೆಸಲು ಅವಕಾಶ ಲಭಿಸಿರುವುದು ನನ್ನ ಭಾಗ್ಯ. ಈ ಪಂದ್ಯದಲ್ಲಿ ಆಡಲು ಕಾತರನಾಗಿದ್ದೇನೆ’ ಎಂದು ಮಾರ್ಗನ್ ಹೇಳಿದರು.
ವೆಸ್ಟ್ ಇಂಡೀಸ್ ತಂಡವನ್ನು ಕಾರ್ಲೋಸ್ ಬ್ರಾಥ್‌ವೇಟ್ ಮುನ್ನಡೆಸಲಿದ್ದು ಕ್ರಿಸ್ ಗೇಲ್, ಮಾರ್ಲನ್ ಸ್ಯಾಮ್ಯುಯೆಲ್ಸ್, ಸ್ಯಾಮ್ಯುಯೆಲ್ ಬದ್ರಿ ಮತ್ತು ಆ್ಯಂಡ್ರೆ ರಸೆಲ್ ಮುಂತಾದವರು ಆಡಲಿದ್ದಾರೆ.
ಕಳೆದ ಬಾರಿ ಬಿರುಗಾಳಿಗೆ ಸಿಲುಕಿ ಹಾಳಾದ ಕ್ರೀಡಾಂಗಣಗಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಿಸಲಾಗುತ್ತದೆ. ಆಂಗಿಲಾ, ಆಂಟಿಗಾ, ಡೊಮಿನಿಕಾ, ಸೇಂಟ್ ಮಾರ್ಟಿನ್ ಮತ್ತು ಸೇಂಟ್ ಥಾಮಸ್‌ನಲ್ಲಿರುವ ಕ್ರೀಡಾಂಗಣಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.