ಪಕ್ಷಭೇದವಿಲ್ಲದೆ 28 ಅಭ್ಯರ್ಥಿಗಳಿಗೆ ಬಿ.ಪ್ಯಾಕ್‌ ಬೆಂಬಲ ಪ್ರಕಟ

7

ಪಕ್ಷಭೇದವಿಲ್ಲದೆ 28 ಅಭ್ಯರ್ಥಿಗಳಿಗೆ ಬಿ.ಪ್ಯಾಕ್‌ ಬೆಂಬಲ ಪ್ರಕಟ

Published:
Updated:

ಬೆಂಗಳೂರು: ಈ ಚುನಾವಣೆಯಲ್ಲಿ 28 ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯು (ಬಿ.ಪ್ಯಾಕ್‌) ಪ್ರಕಟಿಸಿದೆ.

‘ಪಕ್ಷಭೇದವಿಲ್ಲದೆ 27 ಕ್ಷೇತ್ರಗಳ ಅಭ್ಯರ್ಥಿಗಳ ಮಾಹಿತಿ ಕಲೆ ಹಾಕಿದ್ದೆವು. 3,000 ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ಮಾಡಲಾಗಿದೆ. ಅಪರಾಧ ಹಿನ್ನೆಲೆ, ಮಹಿಳೆ–ಮಕ್ಕಳ ಮೇಲೆ ದೌರ್ಜನ್ಯ ಹಿನ್ನೆಲೆ, ಶಾಸಕರ ಮೌಲ್ಯಮಾಪನ ಪ್ರಕ್ರಿಯೆಯೆಲ್ಲಿ ಶೇಕಡ 50ಕ್ಕಿಂತ ಕಡಿಮೆ ಅಂಕ ಪಡೆದವರನ್ನು ಈ ಸಮೀಕ್ಷೆ ವ್ಯಾಪ್ತಿಗೆ ಒಳಪಡಿಸಿಲ್ಲ’ ಎಂದು ಬಿ.ಪ್ಯಾಕ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೇವತಿ ಅಶೋಕ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡವರು, ಕ್ಷೇತ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸಬಲ್ಲ ಸಾಮರ್ಥ್ಯ, ವಿದ್ಯಾರ್ಹತೆ ಅಂಶಗಳನ್ನು ಆಯ್ಕೆ ಪ್ರಕ್ರಿಯೆಗೆ ಮಾನದಂಡವಾಗಿಸಿಕೊಂಡಿದ್ದೇವೆ. ನಾವು ಅನುಮೋದಿಸುವ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ 12, ಬಿಜೆಪಿ8, ಎಎಪಿಯ 3 ಅಭ್ಯರ್ಥಿಗಳು ಸೇರಿದ್ದಾರೆ. ಪ್ರತಿ ಅಭ್ಯರ್ಥಿಗೆ ₹2 ಲಕ್ಷ ನೀಡಲಾಗುವುದು’ ಎಂದರು.

18 ಕ್ಷೇತ್ರಗಳಲ್ಲಿನ 28 ಅಭ್ಯರ್ಥಿಗಳ ಹೆಸರು ಸೂಚಿಸಲಾಗಿದೆ. 8 ಕ್ಷೇತ್ರಗಳಲ್ಲಿ ಬಿ.ಪ್ಯಾಕ್‌ ಮಾನದಂಡದ ಪ್ರಕಾರ ಯಾರೂ ಆಯ್ಕೆ ಆಗಿಲ್ಲ. ಜಯನಗರ ಹಾಗೂ ಆನೇಕಲ್‌ ಕ್ಷೇತ್ರಗಳನ್ನು ಪರಿಗಣಿಸಿಲ್ಲ. ಅಭ್ಯರ್ಥಿಗಳ ಮಾಹಿತಿ– bit.ly/2HXfsI8 ನಲ್ಲಿ ನೋಡಬಹುದು. ಅನುಮೋದಿತ ಅಭ್ಯರ್ಥಿಗಳ ಮಾಹಿತಿ– bit.ly/2wkhY9S‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry