ತ್ರಿವಳಿ ತಲಾಕ್‌: ಕಾಂಗ್ರೆಸ್‌ ನಿಲುವು ಬಹಿರಂಗಪಡಿಸಿ: ರವಿಶಂಕರ್‌ ಪ್ರಸಾದ್‌ ಒತ್ತಾಯ

7

ತ್ರಿವಳಿ ತಲಾಕ್‌: ಕಾಂಗ್ರೆಸ್‌ ನಿಲುವು ಬಹಿರಂಗಪಡಿಸಿ: ರವಿಶಂಕರ್‌ ಪ್ರಸಾದ್‌ ಒತ್ತಾಯ

Published:
Updated:
ತ್ರಿವಳಿ ತಲಾಕ್‌: ಕಾಂಗ್ರೆಸ್‌ ನಿಲುವು ಬಹಿರಂಗಪಡಿಸಿ: ರವಿಶಂಕರ್‌ ಪ್ರಸಾದ್‌ ಒತ್ತಾಯ

ಬೆಂಗಳೂರು: ತ್ರಿವಳಿ ತಲಾಕ್‌ ಕುರಿತು ಕಾಂಗ್ರೆಸ್‌ ನಿಲುವು ಏನು ಎಂಬುದನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಆಗ್ರಹಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತ್ರಿವಳಿ ತಲಾಕ್‌ಗೂ ಧರ್ಮಕ್ಕೂ ಸಂಬಂಧ ಇಲ್ಲ. ಮಹಿಳೆಯರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಲಿಂಗ ಸಮಾನತೆ ಉದ್ದೇಶದಿಂದ ಇದನ್ನು ನಿಷೇಧಿಸಲಾಗಿದೆ. ಮುಸ್ಲಿಂ ರಾಷ್ಟ್ರಗಳಲ್ಲೇ ಇದನ್ನು ನಿಷೇಧಿಸಲಾಗಿದೆ. ಕೆಲ ದೇಶಗಳಲ್ಲಂತೂ ಇದು ಅಪರಾಧವಾಗಿದೆ. ವಸ್ತುಸ್ಥಿತಿ ಹೀಗಿದ್ದೂ, ಕಾಂಗ್ರೆಸ್‌ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ’ ಎಂದು ಆರೋ‍ಪಿಸಿದರು.

ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದಡಿ ಐ.ಟಿ ಉದ್ಯಮಗಳನ್ನು ಸಣ್ಣ ನಗರ ಹಾಗೂ ಪಟ್ಟಣಗಳಿಗೂ ವಿಸ್ತರಿಸುವ ಉದ್ದೇಶದಿಂದ 22 ರಾಜ್ಯಗಳಲ್ಲಿ 82 ಬಿಪಿಒ ಕೇಂದ್ರಗಳನ್ನು ಆರಂಭಿಸಲಾಗಿದೆ. ಮೈಸೂರು, ಮಣಿ‍ಪಾಲ, ಮಂಗಳೂರು, ಕಲಬುರ್ಗಿ, ಉಡುಪಿ, ಶೃಂಗೇರಿ, ವಿಜಯಪುರ, ಹೊಸಪೇಟೆ, ಚಿಕ್ಕಮಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಮ್ಮ ಬಿಪಿಒ ಕೇಂದ್ರಗಳನ್ನು ಆರಂಭಿಸಲಾಗುತ್ತದೆ ಎಂದರು.

ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಕರ್ನಾಟಕವನ್ನು ಮುಂದಕ್ಕೆ ಕೊಂಡೊಯ್ಯಲು ಎರಡು ಎಂಜಿನ್‌ನ ವಾಹನ ಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಮನ್ವಯದಿಂದ ಕೆಲಸ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry