3

'ಜನತಾ ಕೀ ಬಾತ್' ಸಮೀಕ್ಷೆ ಪ್ರಕಾರ 'ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ'; ವಾಟ್ಸ್ಆ್ಯಪ್‍ನಲ್ಲಿ ಹರಿದಾಡಿದ್ದು ಸುಳ್ಳುಸುದ್ದಿ

Published:
Updated:
'ಜನತಾ ಕೀ ಬಾತ್' ಸಮೀಕ್ಷೆ ಪ್ರಕಾರ 'ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ'; ವಾಟ್ಸ್ಆ್ಯಪ್‍ನಲ್ಲಿ ಹರಿದಾಡಿದ್ದು ಸುಳ್ಳುಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ನಡೆಯುತ್ತಿದ್ದಂತೆ ಚುನಾವಣಾ ಪೂರ್ವ ಸಮೀಕ್ಷೆಗಳು ಯಾವ ಪಕ್ಷ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿಯುತ್ತಿವೆ. ಎರಡು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಜನತಾ ಕೀ ಬಾತ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹರಿದಾಡಿತ್ತು. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೇರುತ್ತದೆ ಎಂದು ಜನತಾ ಕೀ ಬಾತ್ ಸಮೀಕ್ಷೆಯಲ್ಲಿ ಹೇಳಿದ್ದು, ಈ ಸಂದೇಶದಲ್ಲಿ ಬಿಬಿಸಿ ನ್ಯೂಸ್ ಲೋಗೊ ಬಳಸಲಾಗಿತ್ತು. ಸಮೀಕ್ಷೆ ಪ್ರಕಾರ 225 ಸದಸ್ಯರಿರುವ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 135, ಜೆಡಿಎಸ್- 45 ಮತ್ತು ಕಾಂಗ್ರೆಸ್ - 35 ಮತ್ತು  ಇತರೆ- 19 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಲಾಗಿತ್ತು.

ಆದರೆ ಈ ಸಮೀಕ್ಷೆ ಸುಳ್ಳು ಸುದ್ದಿ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. 
ಈ ರೀತಿಯ ಸಮೀಕ್ಷೆ ನಡೆಯಲೇ ಇಲ್ಲ. ಅಷ್ಟೇ ಅಲ್ಲದೆ ಈ ಸಮೀಕ್ಷೆ ನಡೆಸಿದ ಜನತಾ ಕೀ ಬಾತ್ ಎಂಬ ಸಂಸ್ಥೆ ಯಾವುದು ಎಂಬುದು ಕೂಡಾ ಪತ್ತೆಯಾಗಿಲ್ಲ ಎಂದು ಆಲ್ಟ್ ನ್ಯೂಸ್ ಹೇಳಿದೆ.

ಆದಾಗ್ಯೂ, ಬಿಬಿಸಿ ನ್ಯೂಸ್‍ಗೂ ಈ ಸಮೀಕ್ಷೆಗೂ ಯಾವುದೇ ಸಂಬಂಧ ಇಲ್ಲ. ಸಮೀಕ್ಷೆ ನಿಜ ಎಂದು ತೋರಿಸಿಕೊಳ್ಳುವುದಕ್ಕಾಗಿ ಬಿಬಿಸಿ ನ್ಯೂಸ್ ಲೋಗೊ ಬಳಸಲಾಗಿದೆ.

ಬಿಬಿಸಿ ಯಾವುದೇ ರೀತಿಯ ಸಮೀಕ್ಷೆ ನಡೆಸಿಲ್ಲ ಎಂದು ಬಿಬಿಸಿಯ ಡಿಜಿಟಲ್ ಲೌಂಚ್ ಎಡಿಟರ್ ತೃಷಾರ್ ಬರೋಟ್ ಅವರು ಟ್ವಿಟರ್‍‍ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ ಸಮೀಕ್ಷೆಯಲ್ಲಿ ಹೇಳಿರುವ ಸೀಟುಗಳ ಸಂಖ್ಯೆಯೂ ತಪ್ಪು, ಕರ್ನಾಟಕ ವಿಧಾನಸಭೆಯಲ್ಲಿನ ಸದಸ್ಯರ ಸಂಖ್ಯೆ  224, ಆದರೆ ಸಮೀಕ್ಷೆಯಲ್ಲಿ ಉಲ್ಲೇಖಿಸಿರುವ ಸೀಟುಗಳ ಸಂಖ್ಯೆ 234! (135+45+35+19=234). ಹಾಗಾಗಿ ಈ ಸಮೀಕ್ಷೆ ಸುಳ್ಳು ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕಾಗಿಲ್ಲ,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry