'ಕರ್ನಾಟಕದಲ್ಲಿ ಜೆಡಿಎಸ್ ಜಯಗಳಿಸಲಿದೆ' ಎಂಬ ಭವಿಷ್ಯ ನುಡಿದು ಅಮೆರಿಕದ ರಾಯಭಾರಿ ಕಚೇರಿ ಹೆಸರಿನಲ್ಲಿ ಹರಿದಾಡುತ್ತಿದೆ ನಕಲಿ ಪತ್ರ!

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಾತ್ಯಾತೀತ ಜನತಾ ದಳ ಅತೀ ಹೆಚ್ಚು ಸೀಟುಗಳನ್ನು ಗಳಿಸಲಿದೆ. ಕಾಂಗ್ರೆಸ್ ಎರಡನೇ ಸ್ಥಾನ ಪಡೆಯಲಿದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ- ಹೀಗೆ ಭವಿಷ್ಯ ನುಡಿದಿರುವ ಅಮೆರಿಕದ ರಾಯಭಾರಿ ಕಚೇರಿಯ ಪತ್ರವೊಂದು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದೆ.
ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯು ರಿಪಬ್ಲಿಕನ್ ಪಕ್ಷದ ಮುಖಂಡ, ರಾಜ್ಯ ಕಾರ್ಯದರ್ಶಿ ಮೈಕ್ ಪಾಂಪೊ ಅವರಿಗೆ ಕಳಿಸಿದ ಪತ್ರವಾಗಿದೆ ಇದು.
(ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿರುವ ಪತ್ರದ ಪ್ರತಿ)
ಪತ್ರದಲ್ಲಿ ಏನಿದೆ?
ಖಾಸಗಿ ಕಂಪನಿಯೊಂದರ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಲಿದ್ದು, ಕಾಂಗ್ರೆಸ್ ಎರಡನೇ ಸ್ಥಾನದಲ್ಲಿರಲಿದೆ. ಆದರೆ ಯಾವುದೇ ಪಕ್ಷ ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸುವುದಕ್ಕೆ ಸಾಧ್ಯತೆಗಳಿಲ್ಲ.
224 ಸೀಟುಗಳಿರುವ ಕರ್ನಾಟಕ ವಿಧಾನಸಭೆಯಲ್ಲಿ 223 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಜೆಡಿಎಸ್ 90, ಕಾಂಗ್ರೆಸ್ 70 ಮತ್ತು ಬಿಜೆಪಿ 63 ಸೀಟುಗಳನ್ನು ಗಳಿಸಲಿದೆ. ಅಷ್ಟೇ ಅಲ್ಲದೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರೊಂದಿಗೆ ಉತ್ತಮ ರಾಜಕೀಯ ಸಂಬಂಧ ಇಟ್ಟುಕೊಳ್ಳುವುದು ಒಳ್ಳೆಯದು ಎಂಬ ಸಲಹೆಯನ್ನು ಇಲ್ಲಿ ನೀಡಲಾಗಿದೆ.
First a Fake survey that gives BJP the highest numbers. Now a Fake survey giving the JDS the highest numbers.
Need I say more?
My appeal to the three parties in the fray (including my own): Let us stick to truth on social media. https://t.co/sP49rXEzAR
— Siddaramaiah (@siddaramaiah) May 8, 2018
ಇದು ನಕಲಿ ಪತ್ರ
ಅಮೆರಿಕದ ರಾಯಭಾರಿ ಕಚೇರಿಯ ಪತ್ರ ಎಂದು ಹೇಳಲಾಗುತ್ತಿರುವ ಈ ಪತ್ರದಲ್ಲಿ ಯಾವುದೇ ಅಧಿಕಾರಿಯ ಸಹಿಯಾಗಲೀ, ಮುದ್ರೆಯಾಗಲೀ ಇಲ್ಲ, ಅಮೆರಿಕದ ಲಾಂಛನ ಮತ್ತು ದೆಹಲಿಯ ರಾಯಭಾರಿ ಕಚೇರಿಯ ವಿಳಾಸ ಬಿಟ್ಟರೆ ಬೇರೆ ಅಧಿಕೃತ ಅಂಶಗಳೇನೂ ಇಲ್ಲ. ಹಾಗಾಗಿ ಇದೊಂದು ನಕಲಿ ಪತ್ರ ಎಂಬುದು ಸ್ಪಷ್ಟ.
[related]
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.