ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರು ಹಂಚಿಕೆ: ಸ್ಕೀಮ್‌ ಕರಡು ಸಲ್ಲಿಕೆಗೆ ಕೇಂದ್ರಕ್ಕೆ 6 ದಿನಗಳ ಗಡುವು ನೀಡಿದ ಸುಪ್ರೀಂ

ನೀರು ಬಿಡುವ ಆತಂಕದಿಂದ ಕರ್ನಾಟಕ ಪಾರು
Last Updated 8 ಮೇ 2018, 8:38 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನೀರು ಹಂಚಿಕೆ ಕುರಿತ ಸ್ಕೀಮ್ ಕರಡು ಸಲ್ಲಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ 6 ದಿನಗಳ ಗಡುವು ನೀಡಿದೆ.

ಮೇ 14ಕ್ಕೆ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಹಾಜರಾಗಲು ಕೋರ್ಟ್‌ ಸೂಚಿಸಿದೆ. ಅದೇ ದಿನ ನ್ಯಾಯಪೀಠಕ್ಕೆ ಸ್ಕೀಮ್ ಕುರಿತ ಕರಡು ಪ್ರತಿ ಸಲ್ಲಿಸಬೇಕಾಗಿದೆ.

ಇದುವರೆಗೆ ಸ್ಕೀಮ್ ರಚನೆ ಮಾಡದ್ದಕ್ಕೆ ಕೇಂದ್ರದ ವಿರುದ್ಧ ತಮಿಳುನಾಡು ಆಕ್ರೋಶ ವ್ಯಕ್ತಪಡಿಸಿದೆ.

ಸದ್ಯಕ್ಕೆ ನೀರು ಬಿಡುಗಡೆಗೆ ಆದೇಶವಿಲ್ಲ

ವಿಧಾನಸಭೆ ಚುನಾವಣೆ ಸಂದರ್ಭ ಕಾನೂನು ಸುವ್ಯವಸ್ಥೆ ಹಾಳಾಗುವ‌ ಭಯದಿಂದ ಸ್ಕೀಂ ಕರಡು ಸಲ್ಲಿಸಿಲ್ಲ ಎಂದು ಅಡ್ವೋಕೇಟ್ ಜನರಲ್ ಕೆ.ಕೆ. ವೇಣುಗೋಪಾಲ ತಿಳಿಸಿದರು. ಸದ್ಯ ನೀರು ಬಿಡುವ ಆತಂಕದಿಂದ ಕರ್ನಾಟಕ ಪಾರಾದಂತಾಗಿದೆ.

ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿದ್ದ ಐತೀರ್ಪನ್ನು ಮಾರ್ಪಡಿಸುವ ಮೂಲಕ ಸುಪ್ರೀಂ ಕೋರ್ಟ್‌ ಕಳೆದ ಫೆಬ್ರುವರಿ 16ರಂದು ನೀಡಿದ ತೀರ್ಪಿನ ಅನ್ವಯ ನೀರು ಹಂಚಿಕೆ ಕುರಿತ ಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳ ಮುಖ್ಯ ಕಾರ್ಯದರ್ಶಿಯವರ ಸಭೆ ಆಯೋಜಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT