ರಘುಮೂರ್ತಿ ರೋಡ್ ಷೋ

7

ರಘುಮೂರ್ತಿ ರೋಡ್ ಷೋ

Published:
Updated:

ಪರಶುರಾಂಪುರ: ‘ಐದು ವರ್ಷಗಳ ಕಾಲ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ಚುನಾವಣೆಯಲ್ಲಿ ಕೂಲಿ ರೂಪದಲ್ಲಿ ನಿಮ್ಮ ಮತವನ್ನು ನೀಡಬೇಕು. ಮುಂದಿನ 5 ವರ್ಷಗಳ ಕಾಲ ಕೆಲಸ ಮಾಡುತ್ತೇನೆ’ ಎಂದು ಚಳ್ಳಕೆರೆ ಕ್ಷೇತ್ರದ ಶಾಸಕ ಕಾಂಗ್ರೆಸ್‌ ಅಭ್ಯರ್ಥಿ ಟಿ. ರಘುಮೂರ್ತಿ ಮನವಿ ಮಾಡಿದರು.

ಪರಶುರಾಂಪುರದಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ‘ಮುಂದಿನ ದಿನಗಳಲ್ಲಿ ನನಗೆ ಅಧಿಕಾರ ಕೊಟ್ಟರೆ ರಾಜ್ಯದಲ್ಲಿಯೇ ಮಾದರಿ ತಾಲ್ಲೂಕಾಗಿ ರೂಪಿಸುತ್ತೇನೆ’ ಎಂದು ತಿಳಿಸಿದರು.

ಸಂಸದ ಬಿ.ಎನ್. ಚಂದ್ರಪ್ಪ , ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್ ರಂಗಸ್ವಾಮಿ, ಕಾಂಗ್ರೆಸ್ ಮುಖಂಡರಾದ ಚನ್ನಕೇಶವ, ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿದರು.

ಕಾಂಗ್ರೆಸ್‌ ಮುಖಂಡರಾದ ರವಿಕುಮಾರ್, ಜಯವೀರಾಚಾರಿ, ಇಬ್ರಾಹಿಂ ಕಲೀಉಲ್ಲಾ, ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಟಪ್ಪ, ಬೊಮ್ಮಲಿಂಗಪ್ಪ, ಸುರೇಶ್, ನಾಗರಾಜ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry