ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೋನಂ ಕಪೂರ್

ಮುಂಬೈ: ಬಾಲಿವುಡ್ ಬೆಡಗಿ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಅವರು ಮುಂಬೈನಲ್ಲಿ ಮಂಗಳವಾರ ಸಪ್ತಪದಿ ತುಳಿದಿದ್ದಾರೆ.
ಬಾಂದ್ರಾದಲ್ಲಿರುವ ಸೋನಂ ಸಂಬಂಧಿ ಕವಿತಾ ಸಿಂಗ್ ಅವರ ನಿವಾಸದಲ್ಲಿ ಎರಡು ಕುಟುಂಬಗಳ ಆಪ್ತರು ಸಂಬಂಧಿಕರ ಸಮ್ಮುಖದಲ್ಲಿ ಸಿಖ್ ಸಂಪ್ರದಾಯದಂತೆ ವಿವಾಹ ನೆರವೇರಿತು.
ಸೋನಂ ಅವರು ವಿವಾಹದ ವೇಳೆ ಕೆಂಪು ಲೆಹಂಗಾ ತೊಟ್ಟು ಮಿಂಚಿದ್ದರೆ, ಅಹುಜಾ ಅವರು ಬಂಗಾರ ಬಣ್ಣದ ಶೇರ್ವಾನಿ ಧರಿಸಿ ಎಲ್ಲರ ಗಮನ ಸೆಳೆದರು. ನವಜೋಡಿಯ ಆರತಕ್ಷತೆ ಸಮಾರಂಭವು ಮುಂಬೈನ ಲೀಲಾ ಹೋಟೆಲ್‌ನಲ್ಲಿ ಸಂಜೆ ನೆರವೇರಲಿದೆ. ಎರಡು ಕುಟುಂಬದ ಆಪ್ತರು, ಸ್ನೇಹಿತರು, ಸಂಬಂಧಿಕರು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.