ಹೊಸ ಜೀವನಕ್ಕೆ ಕಾಲಿಟ್ಟ ಸೋನಂ ಕಪೂರ್

ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಆನಂದ್ ಅಹುಜ್‌ನನ್ನು ವರಿಸಿದ್ದಾರೆ.
ಕೆಂಬಣ್ಣದಲ್ಲಿ ಲೆಂಹಗದ ಜೊತೆ ವಿವಿಧ ರೀತಿಯ ಆಭರಣಗಳನ್ನು ತೊಟ್ಟು ಕಂಗೊಳಿಸುತ್ತಿದ್ದರೆ. ಅಹುಜ್ ಬಂಗಾರ ಬಣ್ಣದ ಶೇರ್‌ವಾನಿಯಲ್ಲಿ ಮಿಂಚಿದ್ದು. ಸಿಖ್ ಸಂಪ್ರದಾಯದಂತೆ ಆನಂದ್ ಅಹುಜ್ ಮತ್ತು ಸೋನಂ ಕಪೂರ್ ಸಪ್ತಪದಿ ತುಳಿದಿದ್ದಾರೆ.
ಸೋನಂ ಕಪೂರ್ ಮತ್ತು ಆನಂದ್ ಅಹುಜಾ ವಿವಾಹವು ಮುಂಬೈನ ಬಾಂದ್ರಾ ಬಂಗ್ಲೆಯಲ್ಲಿ ನೆರವೇರಿದ್ದು ಪ್ರಮುಖ ಬಾಲಿವುಡ್ ನಟ – ನಟಿಯರು ವಿವಾಹದಲ್ಲಿ ಭಾಗಿಯಾಗಿ ನವ ಜೋಡಿಯನ್ನು ಅರಿಸಿದ್ದಾರೆ.
ವಿವಾಹದಲ್ಲಿ ಕುಟುಂಬಸ್ಥರೆಲ್ಲರೂ ಭಾಗಿಯಾಗಿದ್ದು, ಜೊತೆಗೆ ಹಿರಿಯ ನಟ ಅಮಿತಾಭ್ ಬಚ್ಚನ್, ಅಮಿರ್ ಖಾನ್, ರಾಣಿ ಮುಖರ್ಜಿ, ಸೋನಂ ಸಹದ್ಯೋಗಿಗಳಾದ ಸ್ವರ ಭಾಸ್ಕರ್, ಕರೀನಾ ಕಪೂರ್ ಹಲವಾರು ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಸೋನಂ ಕಪೂರ್ ವಿವಾಹದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.