7+1 ಬಿಜೆಪಿ ಗ್ಯಾಂಗ್‌ಗೆ ಕರ್ನಾಟಕ ಒಪ್ಪಿಸಬೇಕೇ?

7

7+1 ಬಿಜೆಪಿ ಗ್ಯಾಂಗ್‌ಗೆ ಕರ್ನಾಟಕ ಒಪ್ಪಿಸಬೇಕೇ?

Published:
Updated:
7+1 ಬಿಜೆಪಿ ಗ್ಯಾಂಗ್‌ಗೆ ಕರ್ನಾಟಕ ಒಪ್ಪಿಸಬೇಕೇ?

ಬೆಂಗಳೂರು: ಭ್ರಷ್ಟಾಚಾರ, ಭೂ ಕಬಳಿಕೆ ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪ ಹೊತ್ತಿರುವ ಬಿಜೆಪಿ ನಾಯಕರ ಹೆಸರುಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಟ್ವಿಟರ್‌ನಲ್ಲಿ ಕೆಣಕಿದ್ದಾರೆ.

‘ಕರ್ನಾಟಕದ ಪ್ರಿಯಜನಗಳೇ, ಬಿಜೆಪಿಯಿಂದ ಗಣಿತ ಕಲಿಯೋಣ ಬನ್ನಿ:

ಜೈಲು ಹಕ್ಕಿ ಯಡ್ಡಿ = 1

ಕುಖ್ಯಾತ ರೆಡ್ಡಿ ಸಹೋದರರು = 2+1 (ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ + ಯಡಿಯೂರಪ್ಪ)

ಶ್ರೀರಾಮುಲು, ಕಟ್ಟಾ ಸುಬ್ರಹ್ಮಣ್ಯ, ಕೃಷ್ಣಯ್ಯ ಶೆಟ್ಟಿ, ಹರತಾಳ ಹಾಲಪ್ಪ, ರೇಣುಕಾಚಾರ್ಯರ’ ಹೆಸರನ್ನು ಉಲ್ಲೇಖಿಸುತ್ತ, ‘ಇಂತಹವರಿಗೆ  ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆ. ಇಂತಹ ಗ್ಯಾಂಗ್‌ಗೆ ಕರ್ನಾಟಕವನ್ನು ಒಪ್ಪಿಸಬೇಕೇ?’ ಎಂದು ಮತದಾರರನ್ನು ಪ್ರಶ್ನಿಸಿದ್ದಾರೆ.

‘ಯೆಡ್ಡಿ ಬೇಡ’ ಎಂಬ ಹ್ಯಾಷ್‌ಟ್ಯಾಗ್‌ ಹಾಕಿ ‘ಜಾಣತನದಿಂದ ಆಯ್ಕೆ ಮಾಡಿ’ ಎಂದು ತಿಳಿಸಿದ್ದಾರೆ. ಅದರೊಂದಿಗೆ ಚುನಾವಣಾ ಪ್ರಚಾರದ ಭಾಷಣದ ವಿಡಿಯೊವೊಂದನ್ನು ಲಗತ್ತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry