ಭಾನುವಾರ, ಮಾರ್ಚ್ 26, 2023
31 °C

ಆಟೊ ಚಾಲಕನ ಮಗಳು ಅಂಜುಮ್‌ಗೆ 559 ಅಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟೊ ಚಾಲಕನ ಮಗಳು ಅಂಜುಮ್‌ಗೆ 559 ಅಂಕ

ಹುಬ್ಬಳ್ಳಿ: ‘ಹಗಲಿರುಳು ಎನ್ನದೇ ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ಅಪ್ಪನ ಆಸೆ ಈಡೇರಿಸಿದ ಹೆಮ್ಮೆಯಿದೆ. ಮುಂದೆ ಇನ್ನಷ್ಟು ಸಾಧನೆ ಮಾಡಲು ಈಗಿನ ಫಲಿತಾಂಶ ಸ್ಫೂರ್ತಿಯಾಗಿದೆ’

ಸೋಮವಾರ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 559 ಅಂಕಗಳನ್ನು ಪಡೆದ ಆಟೊ ಚಾಲಕ ಅಕ್ಟರ್‌ ಸಾಬ್‌ ಅವರ ಪುತ್ರಿ ಅಂಜುಮ್‌ ಮೌಲಾಲಿ ಹೇಳಿದ ಮಾತುಗಳು ಇವು.

ನಗರದ ಭವಾನಿ ಪಾರ್ಕ್‌ ಹತ್ತಿರದ ಅಕ್ಕಮಹಾದೇವಿ ಲೇ ಔಟ್‌ನಲ್ಲಿ ವಾಸವಾಗಿರುವ ಅಕ್ಬರ್‌ ಸಾಬ್‌ ಎರಡು ವರ್ಷಗಳಿಂದ ಆಟೊ ಚಾಲಕರಾಗಿದ್ದಾರೆ. ಇದಕ್ಕೂ ಮೊದಲು ಅವರು ಹಮಾಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದರು.

ಎಫ್‌.ಎಚ್‌. ಕಟ್ಟಿಮನಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಂಜುಮ್‌ ಕನ್ನಡದಲ್ಲಿ 123 ಅಂಕಗಳನ್ನು ಪಡೆದಿದ್ದಾರೆ.ಇಂಗ್ಲಿಷ್‌ನಲ್ಲಿ 96, ಹಿಂದಿಯಲ್ಲಿ 98, ಗಣಿತದಲ್ಲಿ 85, ವಿಜ್ಞಾನದಲ್ಲಿ 75 ಮತ್ತು ಸಮಾಜ ವಿಜ್ಞಾನದಲ್ಲಿ 84 ಅಂಕಗಳನ್ನು ಪಡೆದಿದ್ದಾರೆ. ಶೇ 89.44ರಷ್ಟು ಫಲಿತಾಂಶ ಬಂದಿದೆ.

‘ಅಮ್ಮ ಖಾದರ್‌ಬಿ ಮತ್ತು ಅಪ್ಪ ನೀಡಿದ ನೆರವಿನಿಂದ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ. ಶಿಕ್ಷಕರು ಗುಣಮಟ್ಟದ ಬೋಧನೆ ಮಾಡಿದ್ದು, ಅವರು ನೀಡಿದ ಪ್ರೋತ್ಸಾಹ ಇದಕ್ಕೆಲ್ಲ ಕಾರಣ. ವೈದ್ಯೆಯಾಗಿ ಬಡವರಿಗೆ ಸಹಾಯ ಮಾಡಬೇಕು ಎನ್ನುವ ಆಸೆಯಿದೆ’ ಎಂದು ಅಂಜುಮ್‌ ಹೇಳಿದರು.

‘ಮಕ್ಕಳ ಶಿಕ್ಷಣದ ಮುಂದೆ ನನ್ನ ಕಷ್ಟ ಯಾವ ಲೆಕ್ಕವೂ ಅಲ್ಲ. ಆಕೆ ಎಲ್ಲಿಯವರೆಗೆ ಓದಬೇಕೆಂದು ಬಯಸುತ್ತಾಳೊ, ಅಲ್ಲಿಯವರೆಗೂ ಓದಿಸುತ್ತೇನೆ. ಇಷ್ಟೊಂದು ಅಂಕ ಪಡೆಯುತ್ತಾಳೆ ಎಂದು ನಿರೀಕ್ಷೆ ಮಾಡಿರಲಿಲ್ಲ’ ಎಂದು ಅಕ್ಬರ್‌ ಸಾಬ್‌ ಭಾವುಕರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.