‘ರಾಹುಲ್ ಗಾಂಧಿಗೆ ದೇವೇಗೌಡರು ಉತ್ತರಿಸಬೇಕಿಲ್ಲ’

7

‘ರಾಹುಲ್ ಗಾಂಧಿಗೆ ದೇವೇಗೌಡರು ಉತ್ತರಿಸಬೇಕಿಲ್ಲ’

Published:
Updated:

ಅಂಕೋಲಾ: ‘ರಾಹುಲ್ ಗಾಂಧಿ ಅವರು ದೇವೇಗೌಡರಿಗೆ ಯಾವ ಕಡೆ ಇದ್ದೀರಿ ಎಂದು ಪ್ರಶ್ನಿಸುತ್ತಾರೆ. ಅವರಿಗೆ ದೇವೇಗೌಡರು ಉತ್ತರಿಸಬೇಕಿಲ್ಲ. ನಾವು ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದ ಗುಲಾಮರಲ್ಲ. ಈ ರಾಜ್ಯದ 6.5 ಕೋಟಿ ಜನರ ಗುಲಾಮರು. ಇದನ್ನು ರಾಹುಲ್ ಗಾಂಧಿ ಅರ್ಥೈಸಿಕೊಳ್ಳಲಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ಇಲ್ಲಿನ ಜೈಹಿಂದ್ ಮೈದಾನದಲ್ಲಿ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

‘ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಜನರ ತೆರಿಗೆ ಹಣವನ್ನು ಲೂಟಿ ಮಾಡಿವೆ. ಇಂದು ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಒಬ್ಬರಿಗೊಬ್ಬರು ಲೂಟಿಕೋರರು ಎಂದು ಹೇಳಿಕೊಂಡು ಕೆಸರೆರಚಾಟ ಮಾಡಿಕೊಳ್ಳುತ್ತಿವೆ. ರೈತರ ಸಮಸ್ಯೆಗಳು, ಯುವಕರಿಗೆ ಉದ್ಯೋಗಗಳನ್ನು ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ’ ಎಂದರು.

‘ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಈ ಜಿಲ್ಲೆಯಲ್ಲಿ ವಿಧಾನಸೌಧದ ಅಧಿಕಾರಿಗಳ ತಂಡವನ್ನೇ ಕರೆತಂದು ಒಂದು ತಿಂಗಳು ಇಲ್ಲೇ ಠಿಕಾಣಿ ಹೂಡುತ್ತೇನೆ. ಅರಣ್ಯ ಅತಿಕ್ರಮಣ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುತ್ತೇನೆ. ಒಂದೇ ತಿಂಗಳಿನಲ್ಲಿ ರೈತರ ಹಾಗೂ ಮೀನುಗಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರವಾರ– ಅಂಕೋಲಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry