ಬುಧವಾರ, ಮಾರ್ಚ್ 3, 2021
26 °C

ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರ ದುರ್ಮರಣ

ಹುಬ್ಬಳ್ಳಿ: ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸುವ ಸಂದರ್ಭದಲ್ಲಿ ಹೆಸ್ಕಾಂನವರು ಏಕಾಏಕಿ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಇಬ್ಬರು ಕಾರ್ಮಿಕರು‌ ಸಾವಿಗೀಡಾದ ಹೃದಯವಿದ್ರಾವಕ‌ ಘಟನೆ ನಗರದ ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ಮಂಗಳವಾರ ಸಂಜೆ ನಡೆದಿದೆ.

ತಾಲ್ಲೂಕಿನ ‌ಕರಡಿಕೊಪ್ಪ ಗ್ರಾಮದ ಸಂಗಪ್ಪ ಬಸಪ್ಪ ಸಿದ್ಲಿಂಗನವರ (29), ಮಹಾದೇವಪ್ಪ ಬಾಬಣ್ಣ ಬಾಬಣ್ಣವರ (28) ಸಾವಿಗೀಡಾದವರು.

ವಿದ್ಯುತ್ ಗ್ರಿಡ್‌ನಲ್ಲಿ ಟಿ.ಸಿ. ಅಳವಡಿಸುತ್ತಿದ್ದ ಇಬ್ಬರೂ ಗುತ್ತಿಗೆ ‌ಕಾರ್ಮಿಕರಾಗಿದ್ದರು. ಅವರು ಕಂಬ ಏರಿ ವೈರ್ ಜೋಡಿಸುವ ಕೆಲಸ ಮಾಡುವ ಬಗ್ಗೆ ಮಾಹಿತಿ ಇತ್ತಾದರೂ ಹೆಸ್ಕಾಂ ಸಿಬ್ಬಂದಿ ‌ನಿರ್ಲಕ್ಷ್ಯತನದಿಂದ ವಿದ್ಯುತ್ ಸಂಪರ್ಕ ನೀಡುವ ಮೂಲಕ‌ ಇಬ್ಬರು ಅಮಾಯಕರ ಜೀವ‌ ತೆಗೆದಿದ್ದಾರೆ ಎಂದು ಇದೇ ಕೆಲಸದಲ್ಲಿ ‌ತೊಡಗಿದ್ದ ಕಾರ್ಮಿಕ ‌ಬಸವರಾಜ ದೂರಿದರು.

ಶವಗಳನ್ನು ‌ಕಿಮ್ಸ್ ಆಸ್ಪತ್ರೆಗೆ ‌ರವಾನಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.