ಮುಂದಿನ ಯಾವ ಚುನಾವಣಾ ಪ್ರಚಾರದಲ್ಲೂ ನಾನು ಭಾಗವಹಿಸುವುದಿಲ್ಲ: ನಟ ಸುದೀಪ್‌

7

ಮುಂದಿನ ಯಾವ ಚುನಾವಣಾ ಪ್ರಚಾರದಲ್ಲೂ ನಾನು ಭಾಗವಹಿಸುವುದಿಲ್ಲ: ನಟ ಸುದೀಪ್‌

Published:
Updated:
ಮುಂದಿನ ಯಾವ ಚುನಾವಣಾ ಪ್ರಚಾರದಲ್ಲೂ ನಾನು ಭಾಗವಹಿಸುವುದಿಲ್ಲ: ನಟ ಸುದೀಪ್‌

ಬೆಂಗಳೂರು: ಚುನಾವಣಾ ಪ್ರಚಾರ ವಿಷಯವಾಗಿ ನಟ ಸುದೀಪ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಈಗ ಅದೆಲ್ಲದಕ್ಕೂ ಪೂರ್ಣವಿರಾಮ ಇಟ್ಟಿರುವ ಅವರು ‘ಮುಂದಿನ ಯಾವ ಚುನಾವಣಾ ಪ್ರಚಾರದಲ್ಲೂ ನಾನು ಭಾಗವಹಿಸುವುದಿಲ್ಲ’ ಎಂದಿದ್ದಾರೆ.

ನಾನು ನನ್ನ ಸ್ನೇಹಿತರಿಗಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡೆ. ಅನೇಕ ವರ್ಷಗಳಿಂದ ಅವರನ್ನು ಬಲ್ಲೆ. ನನಗೆ ಅಗತ್ಯವಿದ್ದಾಗ ನನಗೆ ನೆರವಾದರು. ಸಹಾಯ ಸಣ್ಣದೊ, ದೊಡ್ಡದೊ ಅದು ವಿಷಯವಲ್ಲ. ಅವರು ನನ್ನೊಂದಿಗೆ ಇದ್ದದ್ದು ಮುಖ್ಯ. ಹಾಗಾಗಿ ಅವರಿಗೆ ನನ್ನಿಂದ ಸಣ್ಣ ಬೆಂಬಲ ಬೇಕು ಎಂದು ಬಯಸಿದಾಗ, ಅವರಿಗಾಗಿ ನಾನು ಅಲ್ಲಿ ಭಾಗವಹಿಸಿದೆ. ಅದಷ್ಟೇ ನಾನು ಮಾಡಲು ಸಾಧ್ಯ. ಅದಕ್ಕಾಗಿ ಯಾವುದೇ ಮರುಕವಿಲ್ಲ.

ನನ್ನ ಗೆಳೆಯರ ಹಾಗು ಅಭಿಮಾನಿಗಳ ಸಲುವಾಗಿ ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ. ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗು ನನ್ನ ಉಪಸ್ಥಿತಿಯಿಂದ ಫಲಿತಾಂಶ ಬದಲಾಗುತ್ತದೆ ಎಂಬ ಮಟ್ಟಿಗೆ ನಾನು ನನ್ನನ್ನು ದೊಡ್ಡ ಮಟ್ಟಕ್ಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ..

ಸಿದ್ದರಾಮಯ್ಯ ಪರವಾಗಿ ಬಾದಾಮಿಯಲ್ಲಿ ಸುದೀಪ್‌ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿಗೆ ಅಭಿಮಾನಿಗಳಿಂದ ಭಾರಿ ಟೀಕೆಗಳು ಬಂದಿದ್ದವು. ಇದಕ್ಕೆ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದ ಸುದೀಪ್‌ ’ಅದು ಸುಳ್ಳು ಸುದ್ದಿ. ನಾನು ಬಾದಾಮಿಯಲ್ಲಿ ಪ್ರಚಾರ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ನಂತರ ಸುರಪುರದಲ್ಲಿ ಸ್ನೇಹಿತ ರಾಜು ಗೌಡ ಹಾಗೂ ಮೊಳಕಾಲ್ಮುರು ಕ್ಷೇತ್ರದಲ್ಲಿ ಶ್ರೀರಾಮುಲು ಪರವಾಗಿ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry