ಸುರಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ, ಕೊನೆ ಸ್ಥಾನ!

7

ಸುರಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ, ಕೊನೆ ಸ್ಥಾನ!

Published:
Updated:

ಸುರಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಈ ಬಾರಿ ಅತಿ ಕಡಿಮೆ ಫಲಿತಾಂಶ ಬಂದಿದ್ದು ಶೇ 25.43 ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ತಾಲ್ಲೂಕು ಜಿಲ್ಲೆಯಲ್ಲಿ ಕೊನೆ ಸ್ಥಾನ ಪಡೆದಿದೆ.

ಒಟ್ಟು 4,148 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ಆ ಪೈಕಿ 1,055 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಒಟ್ಟು 2,404 ವಿದ್ಯಾರ್ಥಿಗಳಲ್ಲಿ 529 ವಿದ್ಯಾರ್ಥಿಗಳು, 1744 ವಿದ್ಯಾರ್ಥಿನಿಯರಲ್ಲಿ 526 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.

ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಫಲಿತಾಂಶ ಅತಿ ಕಡಿಮೆಯಾಗಿದೆ. ಕೆಲ ಕಡೆಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಪಾಸಾಗಿರುವುದು ವರದಿಯಾಗಿದೆ. ಇದು ವಿದ್ಯಾರ್ಥಿಗಳು, ಪಾಲಕರಲ್ಲಿ ಬೇಸರ ಮೂಡಿಸಿದೆ.

ಸಿ.ಎಸ್‌. ಎಫೆಕ್ಟ್‌:

ಇಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅವಿನಾಶ ಮೆನನ್‌ ಈ ಬಾರಿಯ ಪರೀಕ್ಷೆಗೆ ತೀವ್ರ ನಿಗಾ ವಹಿಸಿದ್ದರು. ಪರೀಕ್ಷೆಗಳನ್ನು ಬಹಳ ಬಿಗಿಯಾಗಿ ನಡೆಸಿದ್ದರು. ಈ ನಿಟ್ಟಿನಲ್ಲಿ ಸುರಪುರದ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿದ್ದರು. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರತಿಶತ ಫಲಿತಾಂಶ:

ಈ ಬಾರಿ ಕಡಿಮೆ ಫಲಿತಾಂಶ ಬಂದರೂ ನಗರದ ಪಡಶೆಟ್ಟಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರತಿಶತ ಫಲಿತಾಂಶ ಬಂದಿದೆ. 6 ಜನ ಉನ್ನತ ಶ್ರೇಣಿ, 9 ಪ್ರಥಮ ಶ್ರೇಣಿ, 3 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಆಯೇಶ ಅಮರ ಶೇ 90.24, ಸೌಮ್ಯ ಪಾಟೀಲ ಶೇ 89.6, ಜಾಹ್ನವಿ ಜೇವರ್ಗಿ ಶೇ 87.84, ಸುರೇಶ ಶೇ. 87.36, ಮನೋಜಕುಮಾರ ಶೇ 85.60, ಅಶ್ವಿನಿ ಶೇ  85.76 ಅಂಕ ಪಡೆದು ಸಾಧನೆ ಮಡಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷೆ ನಾಗಮ್ಮ ಕಾಮನಟಗಿ, ಕಾರ್ಯದರ್ಶಿ ಅಮರ ಪಡಶೆಟ್ಟಿ ಅಭಿನಂದಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry