ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 9–5–1968

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಜನತಾ ಎಕ್ಸ್‌ಪ್ರೆಸ್ – ಗೂಡ್ಸ್ ರೈಲು ಡಿಕ್ಕಿ: ಏಳು ಸಾವು

ಹೈದರಾಬಾದ್, ಮೇ 8– ಮದರಾಸ್‌ನಿಂದ ಹೌರಾಗೆ ಹೊರಟಿದ್ದ ಜನತಾ ಎಕ್ಸ್‌ಪ್ರೆಸ್ ದಕ್ಷಿಣ– ಮಧ್ಯ ರೈಲ್ವೆ ವಿಭಾಗದಲ್ಲಿಯ ಅನಪರ್ತಿ ನಿಲ್ದಾಣದಲ್ಲಿ ಇಂದು ನಿಂತಿದ್ದ ಗೂಡ್ಸ್ ಟ್ರೈನಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದದ್ದರಿಂದ 7 ಮಂದಿ ಸತ್ತರು. ಇತರ 39 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದವು.

ಮೃತಪಟ್ಟ ಏಳು ಮಂದಿಯೂ ರೈಲ್ವೆ ಸಿಬ್ಬಂದಿ ವರ್ಗಕ್ಕೆ ಸೇರಿದವರು.

ಪೂಣಚ್ಚ ರಾಜೀನಾಮೆಗೆ ಒತ್ತಾಯ

ನವದೆಹಲಿ, ಮೇ 8– ರಾಜಮಹೇಂದ್ರಿ–ವಾಲ್ಟೇರ್ ವಿಭಾಗದಲ್ಲಿಯ ಅನಪರ್ತಿ ನಿಲ್ದಾಣದಲ್ಲಿ ರೈಲು ಅಪಘಾತ ಸಂಭವಿಸಿದ್ದರಿಂದ ರೈಲ್ವೆಮಂತ್ರಿ
ಶ್ರೀ ಸಿ.ಎಂ. ಪೂಣಚ್ಚ ಅವರು ರಾಜೀನಾಮೆ ಕೊಡಬೇಕೆಂದು ಇಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಮತ್ತೆ ಒತ್ತಾಯಪಡಿಸಿದರು.

ಯು.ಪಿ. ಕಾಂಗ್ರೆಸ್ ಚುನಾವಣಾ ನಿಧಿಗೆ ಬ್ರಿಟಿಷ್ ಇಂಡಿಯಾ ಕಾರ್ಪೊರೇಷನ್‌ನಿಂದ 20 ಲಕ್ಷ?

ನವದೆಹಲಿ, ಮೇ 8– ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ನಿಧಿ ‘ಹೆಚ್ಚಿಸಿ’ ಪಕ್ಷಕ್ಕೆ ‘ಆಧಾರವಾಗಲು’ ಸರಕಾರವು ಕಾನ್ಪುರದ ಬ್ರಿಟಿಷ್ ಇಂಡಿಯಾ ಕಾರ್ಪೊರೇಷನ್‌ನನ್ನು (ಬಿ.ಐ.ಸಿ.) ಸಾಧನವಾಗಿ ಬಳಸಿಕೊಳ್ಳುತ್ತಿದೆಯೆಂದು ಸ್ವತಂತ್ರ ಪಕ್ಷ ತಂಡದ ನಾಯಕ ಶ್ರೀ ದಹ್ಯಾಭಾಯಿ ಪಟೇಲ್ ಮತ್ತು ಎಸ್.ಎಸ್.ಪಿ. ಸದಸ್ಯ ಶ್ರೀ ರಾಜನಾರಾಯಣ್ ಅವರು ಇಂದು ರಾಜ್ಯಸಭೆಯಲ್ಲಿ ಆರೋಪಿಸಿದರು.

ನಾಲ್ಕನೇ ಯೋಜನೆ ಸಿದ್ಧತೆಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಯೋಜನಾ ಮಂಡಲಿ ರಚನೆ

ಬೆಂಗಳೂರು, ಮೇ 8– ಮೈಸೂರು ರಾಜ್ಯದಲ್ಲಿ ಪ್ರಥಮ ಬಾರಿಗೆ ಯೋಜನಾ ಮಂಡಲಿಯೊಂದನ್ನು ಸರಕಾರ ರಚಿಸಿದೆ.

ನಾಲ್ಕನೇ ಯೋಜನೆಯು ಮುಂದಿನ ವರ್ಷದಿಂದ ಪ್ರಾರಂಭವಾಗಲಿರುವುದರಿಂದ ಅದನ್ನು ರೂಪಿಸಿ ಆದ್ಯತೆ, ಆರ್ಥಿಕ ಮೂಲ ಮೊದಲಾದುವನ್ನು ಇತ್ಯರ್ಥ ಮಾಡುವ ಈ ಮಂಡಲಿಯನ್ನು ಆಡಳಿತ ಸುಧಾರಣಾ ಆಯೋಗದ ಶಿಫಾರಸಿನ ಮೇರೆಗೆ ರಚಿಸಲಾಗಿದೆ.

ನ್ಯಾಯಾಂಗ ವಿಚಾರಣೆಗೆ ಚವಾಣ್‌ ನಕಾರ

ನವದೆಹಲಿ, ಮೇ 8– ಆಂಧ್ರದ ಕೃಷಿ ಸಚಿವ ಶ್ರೀ ತಿಮ್ಮಾರೆಡ್ಡಿ ಅವರ ನಡವಳಿಕೆ ಬಗೆಗೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಒತ್ತಾಯವನ್ನು ಗೃಹ ಸಚಿವ ಶ್ರೀ ಚವಾಣರು ಇಂದು ಲೋಕಸಭೆಯಲ್ಲಿ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT