ಮೆಟ್‌ ಗಾಲಾ ಕಾರ್ಯಕ್ರಮ ಗಮನ ಸೆಳೆದ ಪ್ರಿಯಾಂಕಾ

7

ಮೆಟ್‌ ಗಾಲಾ ಕಾರ್ಯಕ್ರಮ ಗಮನ ಸೆಳೆದ ಪ್ರಿಯಾಂಕಾ

Published:
Updated:
ಮೆಟ್‌ ಗಾಲಾ ಕಾರ್ಯಕ್ರಮ ಗಮನ ಸೆಳೆದ ಪ್ರಿಯಾಂಕಾ

ನ್ಯೂಯಾರ್ಕ್‌: ಫ್ಯಾಷನ್‌ ಕ್ಷೇತ್ರದ ಆಸ್ಕರ್‌ ಎಂದೇ ಕರೆಸಿಕೊಳ್ಳುವ ಮೆಟ್‌ ಗಾಲಾ ಕಾರ್ಯಕ್ರಮದಲ್ಲಿ ನಟಿಯರಾದ ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಗಮನ ಸೆಳೆದಿದ್ದಾರೆ.

ನ್ಯೂಯಾರ್ಕ್‌ ಮೂಲದ ವಸ್ತ್ರವಿನ್ಯಾಸ ಸಂಸ್ಥೆಯ ಪ್ರದರ್ಶನ ಕಾರ್ಯಕ್ರಮ ಮೆಟ್‌ ಗಾಲಾ 2018ರಲ್ಲಿ ಕ್ವಾಂಟಿಕೊ ತಾರೆ ಪ್ರಿಯಾಂಕಾ ಚೋಪ್ರಾ(35) ವೆಲ್ವೆಟ್‌ ನಿಲುವಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ.

ರಾಲ್ಫ್‌ ಲಾರೆನ್‌ ವಿನ್ಯಾಸದ ರೆಡ್‌ ವೈನ್‌ ಬಣ್ಣದ ನಿಲುವಂಗಿ ಹಾಗೂ ಚಿನ್ನದ ವಿನ್ಯಾಸಗೊಳಿಸಿದ ತಲೆಗವುಸು ಧರಿಸಿದ್ದ ಪ‍್ರಿಯಾಂಕಾ, ಕೆಂಪು ಬಣ್ಣದ ನಿಲುವಂಗಿ ತೊಟ್ಟಿದ್ದ ದೀಪಿಕಾ ಗಮನ ಸೆಳೆದರು. ‘ಹೆವೆನ್ಲಿ ಬಾಡೀಸ್‌: ಫ್ಯಾಷನ್‌ ಆ್ಯಂಡ್‌ ದಿ ಕ್ಯಾಥೋಲಿಕ್‌ ಇಮ್ಯಾಜಿನೇಷನ್‌’ ಈ ಬಾರಿಯ ವಸ್ತ್ರ ವಿನ್ಯಾಸದ ವಿಷಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry