ಸದಸ್ಯರ ನಿಷ್ಠೆ ಪರಿಶೀಲನೆಗೆ ವಿಆರ್‌ ತಂತ್ರಜ್ಞಾನ

7

ಸದಸ್ಯರ ನಿಷ್ಠೆ ಪರಿಶೀಲನೆಗೆ ವಿಆರ್‌ ತಂತ್ರಜ್ಞಾನ

Published:
Updated:
ಸದಸ್ಯರ ನಿಷ್ಠೆ ಪರಿಶೀಲನೆಗೆ ವಿಆರ್‌ ತಂತ್ರಜ್ಞಾನ

ಬೀಜಿಂಗ್‌: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷವು ತನ್ನ ಸದಸ್ಯರ ನಿಷ್ಠೆಯನ್ನು ಪರಿಶೀಲಿಸಲು ವರ್ಚುವಲ್ ರಿಯಾಲಿಟಿ (ವಿಆರ್‌) ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.

ಪೂರ್ವ ಚೀನಾದ ಷಾಡಂಗ್‌ ಪ್ರಾಂತ್ಯದ ಕ್ವಿಂಗ್ಯಾಂಗ್‌, ಬಿನ್ಜೂ ‍ನಗರಗಳಲ್ಲಿರುವ ಪಕ್ಷದ ಸದಸ್ಯರು ಮೊದಲ ಬಾರಿಗೆ ವಿಆರ್ ಪರಿಶೀಲನೆಗೆ ಒಳಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಿಆರ್‌ ಹೆಡ್‌ಸೆಟ್‌ಗಳನ್ನು ಧರಿಸಿ ಸದಸ್ಯರು ವರ್ಚುವಲ್‌ ಕೋಣೆಯನ್ನು ಪ‍್ರವೇಶಿಸುತ್ತಾರೆ. ಅಲ್ಲಿ ಅವರಿಗೆ ಪಕ್ಷದ ಸಿದ್ಧಾಂತಗಳಿಗೆ ಸಂಬಂಧಪಟ್ಟ 30 ಪ್ರಶ್ನೆಗಳ ಪರೀಕ್ಷೆ ನಡೆಸಲಾಗುತ್ತದೆ.

ಪರೀಕ್ಷೆಯ ಮೂಲಕ ಸದಸ್ಯರ ದುರ್ಬಲ ವಿಷಯಗಳನ್ನು ಕಂಡು ಹಿಡಿದು ಅವರಿಗೆ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಲಾಗುತ್ತದೆ ಎಂದಿದೆ.

ಪಕ್ಷದ ಸ್ಥಳೀಯ ಸೇವಾಕೇಂದ್ರಗಳಲ್ಲಿ ಪರಿಶೀಲನಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಏಪ್ರಿಲ್‌ ತಿಂಗಳಿಂದ ಇದು ಕಾರ್ಯ ನಿರ್ವಹಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry