ಇಂಡಿಗೊ ವಿಮಾನದಲ್ಲಿ ಸೊಳ್ಳೆ ಬ್ಯಾಟ್‌

7

ಇಂಡಿಗೊ ವಿಮಾನದಲ್ಲಿ ಸೊಳ್ಳೆ ಬ್ಯಾಟ್‌

Published:
Updated:
ಇಂಡಿಗೊ ವಿಮಾನದಲ್ಲಿ ಸೊಳ್ಳೆ ಬ್ಯಾಟ್‌

ನವದೆಹಲಿ: ಇಂಡಿಗೊ ವಿಮಾನಗಳಲ್ಲಿ ಸೊಳ್ಳೆ ಕಾಟದ ದೂರುಗಳು ಹೆಚ್ಚುತ್ತಿರುವುದರಿಂದ, ಎಲೆಕ್ಟ್ರಾನಿಕ್‌ ಸೊಳ್ಳೆ ಬ್ಯಾಟ್‌ಗಳನ್ನು ಬಳಸಲು ವಿಮಾನಯಾನ ಸಂಸ್ಥೆ ಮುಂದಾಗಿದೆ. 

‘ವಿಮಾನ ಟೇಕ್‌ ಆಫ್‌ಗೂ ಮೊದಲು, ಅನುಮತಿ ಇರುವ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ ಮತ್ತು ಸೊಳ್ಳೆ ನಿವಾರಕ ಬಿಲ್ಲೆಗಳನ್ನು ಇರಿಸಲಾಗುತ್ತದೆ. ಆದರೆ ಅಸಾಧಾರಣ ಸನ್ನಿವೇಶಗಳಲ್ಲಿ ಮಾತ್ರ ಈ ಎಲೆಕ್ಟ್ರಾನಿಕ್‌ ಸೊಳ್ಳೆ ಬ್ಯಾಟ್‌ಗಳನ್ನು ಬಳಸಲಾಗುವುದು’ ಎಂದು ಸಂಸ್ಥೆ ಹೇಳಿದೆ.

ಈಚೆಗಷ್ಟೆ ಬೆಂಗಳೂರಿನ ವೈದ್ಯ ಸೌರಭ್ ರಾಯ್ ಅವರು ಇಂಡಿಗೊ ವಿಮಾನದಲ್ಲಿ ಸೊಳ್ಳೆ ಇರುವುದಾಗಿ ದೂರಿದ್ದರಿಂದ ಲಖನೌದಲ್ಲಿ ಅವರನ್ನು ವಿಮಾನದಿಂದ ಇಳಿಸಲಾಗಿತ್ತು. ತಮ್ಮ ಮೇಲೆ ವಿಮಾನದ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಸೌರಭ್‌ ದೂರಿದ್ದರು. ಆದರೆ ಅದನ್ನು ಇಂಡಿಗೊ ನಿರಾಕರಿಸಿತ್ತು.

ಈ ಕುರಿತು ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಆದೇಶಿಸಿತ್ತು. ಈ ಬೆನ್ನಲ್ಲೇ ಸಂಸ್ಥೆ ಸೊಳ್ಳೆ ಬ್ಯಾಟ್‌ ಬಳಸುವುದಾಗಿ ಘೋಷಿಸಿದೆ.

ರಾಯ್ ಪ್ರಕರಣ ವರದಿಯಾಗುತ್ತಿದ್ದಂತೆ, ಇಂಡಿಗೊ ವಿಮಾನದಲ್ಲಿ ಸೊಳ್ಳೆ ಕಾಟದ ಕುರಿತು ಪ್ರಯಾಣಿಕರು ಸಾಕಷ್ಟು ಟ್ವೀಟ್ ಮಾಡಿದ್ದರು. ಸಂಸ್ಥೆ ಪ್ರಯಾಣಿಕರ ಕ್ಷಮೆ ಕೋರಿತ್ತು. ಪ್ರಯಾಣದ ವೇಳೆ ಕ್ರಿಮಿನಾಶಕಗಳನ್ನು ಸಿಂಪಡಿಸುವುದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿಷೇಧ ಹೇರಿದೆ. ಈ ನಿಯಮವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದೂ ಸಂಸ್ಥೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry