ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ

7

ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ

Published:
Updated:

ಮುಜಫ್ಫರ್‌ನಗರ: ದೆಹಲಿ–ಡೆಹರಾಡೂನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ಸೋಮವಾರ ಸಂಜೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ.

ಅತ್ಯಾಚಾರಕ್ಕೂ ಮುನ್ನ ಆಕೆಯ ಮೂರು ವರ್ಷದ ಮಗುವನ್ನು ದುಷ್ಕರ್ಮಿಗಳು ಕಾರಿನಿಂದ ಎಸೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಸಮೀಪದ ಗ್ರಾಮದ ಜನರು ಆಸ್ಪತ್ರೆಗೆ ದಾಖಲಿಸಿದ್ದು, ಮಗು ಅಪಾಯದಿಂದ ಪಾರಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನೌಕರಿ ಕೊಡಿಸುವ ನೆಪದಲ್ಲಿ ನನ್ನನ್ನು ಆರ್‌.ಕೆ.ಮೆಹತಾ ಎಂಬ ವ್ಯಕ್ತಿ ಕಾರಿನಲ್ಲಿ ಕರೆದುಕೊಂಡು ಹೋದರು. ಮೆಹತಾ ಹಾಗೂ ಆತನ ಸ್ನೇಹಿತನೊಬ್ಬ ಮತ್ತು ಬರುವ ಪದಾರ್ಥವನ್ನು ಮದ್ಯದಲ್ಲಿ ಸೇರಿಸಿ ಕುಡಿಸಿ, ಇಬ್ಬರೂ ನನ್ನ ಮೇಲೆ ಅತ್ಯಾಚಾರ ಎಸಗಿದರು’ ಎಂದು ಮಹಿಳೆ ‍ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಬಾಂದಾ (ಉತ್ತರ ಪ್ರದೇಶ): ಇಲ್ಲಿಗೆ ಸಮೀಪದ ತಿಂದ್ವಾರಿಯಲ್ಲಿ ಆರು ವರ್ಷದ ಬಾಲಕಿ ಮೇಲೆ ಆಕೆಯ ಸಂಬಂಧಿಯೇ ಅತ್ಯಾಚಾರ ಎಸಗಿದ್ದಾರೆ.

ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆಕೆಯ ಸಂಬಂಧಿ, 19 ವರ್ಷದ ಶೈಲೇಂದ್ರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry