ಇ–ಮೇಲ್‌ ಮೂಲಕ ನಾಮಪತ್ರ: ಸ್ವೀಕಾರಕ್ಕೆ ಹೈಕೋರ್ಟ್‌ ನಿರ್ದೇಶನ

7

ಇ–ಮೇಲ್‌ ಮೂಲಕ ನಾಮಪತ್ರ: ಸ್ವೀಕಾರಕ್ಕೆ ಹೈಕೋರ್ಟ್‌ ನಿರ್ದೇಶನ

Published:
Updated:

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಂಬರುವ ಪಂಚಾಯತಿ ಚುನಾವಣೆಗೆ ಇ–ಮೇಲ್‌ ಮೂಲಕ ಕಳುಹಿಸಿರುವ ನಾಮಪತ್ರಗಳನ್ನು ಸ್ವೀಕರಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್‌ ರಾಜ್ಯ ಚುನಾವಣಾ ಆಯೋಗಕ್ಕೆ ಮಂಗಳವಾರ ನಿರ್ದೇಶನ ನೀಡಿದೆ.

ಏಪ್ರಿಲ್‌ 23ರ ಮಧ್ಯಾಹ್ನ 3ರವರೆಗೆ ಇ–ಮೇಲ್‌ ಮೂಲಕ ಸಲ್ಲಿಸಿರುವ ನಾಮಪತ್ರಗಳನ್ನು ಸ್ವೀಕರಿಸಬೇಕು ಎಂದು ನ್ಯಾಯಮೂರ್ತಿ ಬಿ.ಸೋಮಾದರ್‌ ಹಾಗೂ ಎ.ಮುಖರ್ಜಿ ಅವರಿದ್ದ ವಿಭಾಗೀಯ ಪೀಠ ನಿರ್ದೇಶಿಸಿದೆ.

ಸಿಪಿಎಂ ಸಲ್ಲಿಸಿದ ಮೇಲ್ಮನವಿ ಪರಿಗಣಿಸಿ ಕಲ್ಕತ್ತಾ ಹೈಕೋರ್ಟ್‌ ಈ ನಿರ್ದೇಶನ ನೀಡಿದೆ. ಇ-ಮೇಲ್ ಮೂಲಕ ನಾಮಪತ್ರ ಸಲ್ಲಿಕೆಗೆ ಚುನಾವಣಾ ಆಯೋಗ ವಿರೋಧ ವ್ಯಕ್ತಪಡಿಸಿತ್ತು. ಪಶ್ಚಿಮ ಬಂಗಾಳ ಪಂಚಾಯತ್‌ರಾಜ್‌ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಿಲ್ಲ ಎಂದು ಆಯೋಗ ಹೇಳಿತ್ತು.

ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ 800 ಮಂದಿಯ ನಾಮಪತ್ರಗಳನ್ನು ಸಲ್ಲಿಸದಂತೆ ತಡೆಯಲಾಗಿದ್ದು, ಅವರೆಲ್ಲರೂ ಇ– ಮೇಲ್‌ ಮೂಲಕ ಆಯೋಗಕ್ಕೆ ನಾಮಪತ್ರದ ದಾಖಲೆಗಳನ್ನು ಕಳುಹಿಸಿದ್ದಾರೆ ಎಂದು ಸಿಪಿಎಂ ಅಭ್ಯರ್ಥಿಗಳ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry