ಎಂಎಫ್‌: ಏಪ್ರಿಲ್‌ ತಿಂಗಳಲ್ಲಿ ₹ 1.4 ಲಕ್ಷ ಕೋಟಿ ಹೂಡಿಕೆ

7

ಎಂಎಫ್‌: ಏಪ್ರಿಲ್‌ ತಿಂಗಳಲ್ಲಿ ₹ 1.4 ಲಕ್ಷ ಕೋಟಿ ಹೂಡಿಕೆ

Published:
Updated:

ನವದೆಹಲಿ: ಹೂಡಿಕೆದಾರರು ಏಪ್ರಿಲ್‌ ತಿಂಗಳಿನಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ₹ 1.4 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ.

ಇದರಿಂದ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ನಿರ್ವಹಣೆಯಲ್ಲಿರುವ ಒಟ್ಟಾರೆ ಸಂಪತ್ತು ಮೌಲ್ಯ ₹ 23.25 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಮಾರ್ಚ್‌ನಲ್ಲಿ ₹ 50,752 ಕೋಟಿ ಹೂಡಿಕೆ ಆಗಿತ್ತು. ಅದರಿಂದ ಉದ್ಯಮದ ನಿರ್ವಹಣೆಯಲ್ಲಿದ್ದ ಸಂಪತ್ತು ಮೌಲ್ಯ ₹ 21.36 ಲಕ್ಷ ಕೋಟಿ ಇತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟವು (ಎಎಂಎಫ್‌ಐ) ಮಾಹಿತಿ ನೀಡಿದೆ.

ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ಪ್ರತ್ಯೇಕ ನೆಲೆಯಲ್ಲಿ ಮತ್ತು ಒಟ್ಟಾರೆ ಉದ್ಯಮದ ಮಟ್ಟದಲ್ಲಿಯೂ ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಕ್ರಮಗಳು ಫಲ ನೀಡುತ್ತಿವೆ. ಇದರಿಂದ ನಿರ್ವಹಣಾ ಸಂಪತ್ತು ಇನ್ನೂ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ಉದ್ಯಮದ   ತಜ್ಞರು ಹೇಳಿದ್ದಾರೆ.

ಸಾಂಪ್ರದಾಯಿಕ ಹೂಡಿಕೆ ಮಾರ್ಗಗಳಿಗಿಂತಲೂ  ಸಂಪತ್ತು ಸೃಷ್ಟಿಸುವ ಪರ್ಯಾಯ ಮಾರ್ಗಗಳಲ್ಲಿ ಬಂಡವಾಳ ತೊಡಗಿಸಲು ಹೂಡಿಕೆದಾರರು ಹೆಚ್ಚು ಗಮನ ನೀಡುತ್ತಿದ್ದಾರೆ. ಇದರಿಂದಲೂ ಮ್ಯೂಚುವಲ್‌ ಫಂಡ್‌ಗಳಿಗೆ ಹೆಚ್ಚಿನ ಹಣ ಹರಿದುಬರುತ್ತಿದೆ.

ನಗದು ಸಂಪತ್ತುಗಳಲ್ಲಿ ₹ 1.16 ಲಕ್ಷ ಕೋಟಿ, ಷೇರು ಮತ್ತು ಸಂಬಂಧಿತ ಉಳಿತಾಯ ಯೋಜನೆಗಳಲ್ಲಿ ₹ 11 ಸಾವಿರ ಕೋಟಿ ಹಾಗೂ ಆದಾಯ ನಿಧಿಗಳಲ್ಲಿ ₹ 5,220 ಕೋಟಿ ಹೂಡಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry