ಕ್ಯಾಂಪ್ಕೊ: ₹ 1,740 ಕೋಟಿ ವ್ಯವಹಾರ

7

ಕ್ಯಾಂಪ್ಕೊ: ₹ 1,740 ಕೋಟಿ ವ್ಯವಹಾರ

Published:
Updated:

ಕಾಸರಗೋಡು: ‘ಕ್ಯಾಂಪ್ಕೊ ಸಂಸ್ಥೆಯು 2017-18ನೇ ಸಾಲಿನಲ್ಲಿ ₹ 1,740 ಕೋಟಿ ವ್ಯವಹಾರ ನಡೆಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸಂಸ್ಥೆಯು ₹ 1,454 ಕೋಟಿ ಮೊತ್ತದ 52,451 ಟನ್ ಅಡಿಕೆ  ಖರೀದಿಸಿದೆ. ₹1,472.45 ಕೋಟಿ ಮೌಲ್ಯದ 50,589 ಟನ್ ಅಡಿಕೆಯನ್ನು ಮಾರಾಟ ಮಾಡಿದೆ. ಒಟ್ಟು ₹718 ಕೋಟಿ ಮೌಲ್ಯದ ಕೆಂಪಡಿಕೆ ಹಾಗೂ ₹ 735 ಕೋಟಿ ಮೌಲ್ಯದ ಬಿಳಿ ಅಡಿಕೆ ಖರೀದಿಸಲಾಗಿದೆ’ ಎಂದರು.

ಕ್ಯಾಂಪ್ಕೊ 13,685 ಟನ್ ಚಾಕ್‌ಲೇಟ್‌ ತಯಾರಿಸಿದೆ. ಇವುಗಳಲ್ಲಿ 8,089 ಕ್ಯಾಂಪ್ಕೊ ಬ್ರ್ಯಾಂಡ್‌ನ ಚಾಕ್‌ಲೇಟ್‌ ತಯಾರಿಸಲಾಗಿದೆ. ಒಟ್ಟು ₹181 ಕೋಟಿ ಮೊತ್ತದ ಚಾಕ್‌ಲೇಟ್‌ ಮಾರಾಟವಾಗಿದ್ದು, ₹ 20 ಕೋಟಿ ಮೊತ್ತದ ಚಾಕ್‌ಲೇಟ್‌ ರಫ್ತು ಮಾಡಲಾಗಿದೆ. ಕ್ಯಾಂಪ್ಕೊ ಚಾಕ್‌ಲೇಟ್‌ಗೆ ಕೇಂದ್ರ ವಾಣಿಜ್ಯ ಸಚಿವಾಲಯದ ಶ್ರೇಷ್ಠ ರಫ್ತು ಪ್ರಶಸ್ತಿ ಸತತವಾಗಿ 4ನೇ ಬಾರಿ ಲಭಿಸಿದೆ' ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry