ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ಪೇನ್‌ ನಾಯಕ

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಸಿಡ್ನಿ: ಮುಂದಿನ ತಿಂಗಳು ನಡೆಯುವ ಇಂಗ್ಲೆಂಡ್‌ ಎದುರಿನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಟಿಮ್‌ ಪೇನ್ ಅವರು ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಪೇನ್‌ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಆ್ಯರನ್‌ ಫಿಂಚ್‌ಗೆ ಉಪ ನಾಯಕನ ಜವಾಬ್ದಾರಿ ವಹಿಸಲಾಗಿದೆ.

ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್‌ ಸ್ಮಿತ್‌ ಮೇಲೆ ಸಿಎ ಒಂದು ವರ್ಷ ನಿಷೇಧ ಹೇರಿತ್ತು. ಹೀಗಾಗಿ 33ರ ಹರೆಯದ ಪೇನ್‌ ಅವರು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಪಂದ್ಯದಲ್ಲಿ ತಂಡದ ಸಾರಥ್ಯ ವಹಿಸಿದ್ದರು.

ಇಂಗ್ಲೆಂಡ್‌ ಎದುರಿನ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಹೋರಾಟ ಜೂನ್‌ 13ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ.

ಇಂಗ್ಲೆಂಡ್‌ ಎದುರಿನ ಏಕೈಕ ಟ್ವೆಂಟಿ–20 ಪಂದ್ಯ ಹಾಗೂ ಜಿಂಬಾಬ್ವೆ ಮತ್ತು ಪಾಕಿಸ್ತಾನ ಎದುರಿನ ತ್ರಿಕೋನ ಟ್ವೆಂಟಿ–20 ಸರಣಿಗೂ ತಂಡವನ್ನು ಬಿಡುಗಡೆ ಮಾಡಲಾಗಿದೆ.

ಏಕದಿನ ತಂಡ: ಟಿಮ್‌ ಪೇನ್‌ (ನಾಯಕ), ಆ್ಯರನ್‌ ಫಿಂಚ್‌ (ಉಪ ನಾಯಕ), ಆ್ಯಷ್ಟನ್‌ ಅಗರ್‌, ಅಲೆಕ್ಸ್‌ ಕೇರಿ, ಜೋಶ್‌ ಹ್ಯಾಜಲ್‌ವುಡ್‌, ಟ್ರಾವಿಸ್‌ ಹೆಡ್‌, ನೇಥನ್‌ ಲಿಯೊನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಶಾನ್‌ ಮಾರ್ಷ್‌, ಜೇ ರಿಚರ್ಡ್‌ಸನ್‌, ಕೇನ್‌ ರಿಚರ್ಡ್‌ಸನ್‌, ಡಿ ಆರ್ಸಿ ಶಾರ್ಟ್‌, ಬಿಲ್ಲಿ ಸ್ಟಾನ್‌ಲೇಕ್‌, ಮಾರ್ಕಸ್‌ ಸ್ಟೊಯಿನಿಸ್‌ ಮತ್ತು ಆ್ಯಂಡ್ರ್ಯೂ ಟೈ.

ಟ್ವೆಂಟಿ–20 ತಂಡ: ಆ್ಯರನ್‌ ಫಿಂಚ್‌ (ನಾಯಕ), ಅಲೆಕ್ಸ್‌ ಕೇರಿ (ಉಪ ನಾಯಕ), ಆ್ಯಷ್ಟನ್‌ ಅಗರ್‌, ಟ್ರಾವಿಸ್‌ ಹೆಡ್‌, ನಿಕ್‌ ಮ್ಯಾಡಿನ್‌ಸನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೇ ರಿಚರ್ಡ್‌ಸನ್‌, ಡಿ ಆರ್ಸಿ ಶಾರ್ಟ್‌, ಬಿಲ್ಲಿ ಸ್ಟಾನ್‌ಲೇಕ್‌, ಮಾರ್ಕಸ್‌ ಸ್ಟೊಯಿನಿಸ್‌, ಮಿಷೆಲ್‌ ಸ್ವೆಪ್ಸನ್‌, ಆ್ಯಂಡ್ರ್ಯೂ ಟೈ ಮತ್ತು ಜ್ಯಾಕ್ ವಿಲ್ಡರ್‌ಮ್ಯಾಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT