ಬೆಟ್ಟಿಂಗ್: ಐವರ ಸೆರೆ

7

ಬೆಟ್ಟಿಂಗ್: ಐವರ ಸೆರೆ

Published:
Updated:

ಬೆಂಗಳೂರು: ಐಪಿಎಲ್‌ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿದ್ದ ವೇಳೆ ಬೆಟ್ಟಿಂಗ್‌ ಕಟ್ಟುತ್ತಿದ್ದ ಆರೋಪದಡಿ ಗೌತಮ್‌ ಸೇರಿದಂತೆ ಐವರನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ಕಾಡುಗೋಡಿಯ ಸೀಗೆಹಳ್ಳಿ ಬಳಿಯ ಮನೆಯೊಂದರಲ್ಲಿ ಆರೋಪಿಗಳು ಬೆಟ್ಟಿಂಗ್‌ ನಡೆಸುತ್ತಿದ್ದರು. ಖಚಿತ ಮಾಹಿತಿ ಪಡೆದು ಮನೆ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಿದ್ದೇವೆ. 50 ಮೊಬೈಲ್‌ಗಳು, ಲ್ಯಾಪ್ ಟಾಪ್ ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

‘ಹೊಸಕೋಟೆ ನಿವಾಸಿ ಗೌತಮ್, ಪ್ರಕರಣದ ಪ್ರಮುಖ ಆರೋಪಿ. ಕಾಡುಗೋಡಿ, ಕೆ.ಆರ್.ಪುರ ಹಾಗೂ ಹೊಸಕೋಟೆಯಲ್ಲಿ ಆತ ಬೆಟ್ಟಿಂಗ್‌ ಕಟ್ಟಿಸಿ

ಕೊಳ್ಳುತ್ತಿದ್ದ.

‘ನಕಲಿ ದಾಖಲೆ ಕೊಟ್ಟು ಖರೀದಿಸಿದ್ದ ಸಿಮ್‌ ಕಾರ್ಡ್‌ಗಳನ್ನು ಆರೋಪಿಗಳು ಬಳಕೆ ಮಾಡುತ್ತಿದ್ದರು. ಮೊಬೈಲ್‌ ಮೂಲಕವೇ ಹಲವರನ್ನು ಸಂಪರ್ಕಿಸಿ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಈ ದಂಧೆಯಲ್ಲಿ ಇನ್ನು ಹಲವರು ಭಾಗಿಯಾಗಿರುವ ಅನುಮಾನವಿದ್ದು, ಅವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry