ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಕ್ಷ ದಲಿತ ಪರ ಅಲ್ಲ, ಡೀಲ್ ಪರ: ನರೇಂದ್ರ ಮೋದಿ

Last Updated 9 ಮೇ 2018, 7:53 IST
ಅಕ್ಷರ ಗಾತ್ರ

ಕೋಲಾರ: ಈ ಚುನಾವಣೆ ಯಾವ ಪಕ್ಷ ಗೆಲ್ಲುತ್ತದೆ ಮತ್ತು ಯಾವ ಶಾಸಕ ಗೆಲ್ಲುತ್ತಾರೆ ಎಂಬುದಕ್ಕೆ ಮಾತ್ರ ಸೀಮಿತವಲ್ಲ. ಈ ಚುನಾವಣೆ ಮುಂದಿನ 5 ವರ್ಷಗಳ ಕಾಲ ಕರ್ನಾಟಕದ ಭವಿಷ್ಯವನ್ನು ನಿರ್ಣಯಿಸುತ್ತದೆ.

ಮೋದಿ ಭಾಷಣದ ಮುಖ್ಯಾಂಶಗಳು

* ಕಾಂಗ್ರೆಸ್ ಸಂಸ್ಕೃತಿ, ಅವರ ಧೋರಣೆ, ಅವರ ಸಚಿವರ ಬಗ್ಗೆ ದೇಶದ ಜನತೆಗೆ ಗೊತ್ತಿದೆ. ಹಾಗಾಗಿಯೇ ಜನರು ಆ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಇದೀಗ ಕರ್ನಾಟಕದ ಸರದಿ. ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಿದೆ.

* ದೇಶದಲ್ಲಿದ್ದ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಜನರು ಸಿಟ್ಟುಗೊಂಡಿದ್ದಾರೆ. ಕರ್ನಾಟಕಕ್ಕೆ ದೇಶದಲ್ಲಿ ವಿಶೇಷ ಸ್ಥಾನವಿದೆ.ಆದರೆ ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷದಲ್ಲಿ ರಾಜ್ಯವನ್ನು ಹಾಳು ಮಾಡಿದೆ. ಕೋಮುವಾದ, ಜಾತಿವಾದ, ಭ್ರಷ್ಟಾಚಾರ, ಅಪರಾಧ ಕೃತ್ಯ, ಗುತ್ತಿಗೆ ವ್ಯವಸ್ಥೆಗಳಿಂದಾಗಿ ಕಾಂಗ್ರೆಸ್ ಸಂವಿಧಾನದ ರೀತಿ ನೀತಿಗಳನ್ನೇ ಹಾಳುಮಾಡಿದೆ, ಇವೆಲ್ಲವೂ ಕರ್ನಾಟಕದ ಭವಿಷ್ಯವನ್ನೇ ಹಾಳು ಮಾಡುತ್ತಿದೆ.

* ಅಧಿಕಾರಕ್ಕೇರಿದ ಕೂಡಲೇ ಭ್ರಷ್ಟಾಚಾರ, ವಂಶಾಡಳಿತ ರಾಜಕೀಯವನ್ನು ಮಾಡಲು ಸಿಕ್ಕಿದ ಅವಕಾಶ ಎಂದು ಕಾಂಗ್ರೆಸ್ ಭಾವಿಸುತ್ತದೆ. ಕರ್ನಾಟಕದ ಘನತೆಗೆ ತಕ್ಕಂತಿರುವ ನಿಷ್ಠಾವಂತರನ್ನು ಆಯ್ಕೆ ಮಾಡುವ ಅವಕಾಶ ಈಗ ಬಂದೊದಗಿದೆ.

* ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದರು. ಆದರೆ ಅವರ ರಿಮೋಟ್ 10 ಜನಪಥ್‍ನಲ್ಲಿರುವ ಮೇಡಂ ಸೋನಿಯಾ ಗಾಂಧಿ ಬಳಿಯಲ್ಲಿತ್ತು. ಬಿಜೆಪಿಗೂ ರಿಮೋಟ್ ಕಂಟ್ರೋಲ್ ಇದೆ. ಆದರೆ ನಮ್ಮ ಹೈಕಮಾಂಡ್ ದೇಶದ ಜನರೇ ಆಗಿದ್ದಾರೆ. ದೇಶದ ಜನರೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೈಕಮಾಂಡ್.

* ಕಾಂಗ್ರೆಸ್ ಪಕ್ಷ ಚಿನ್ನದ ಚಮಚದೊಂದಿಗೆ ಹುಟ್ಟಿದೆ. ದೇಶದ ಬಡವರ ಯಾತನೆಗಳು ಅವರಿಗೆ ಅರ್ಥವಾಗುವುದಿಲ್ಲ. ನಾನು ದೇಶದಲ್ಲಿ ಶೌಚಾಲಯ ನಿರ್ಮಿಸಿದರೆ, ನಾನು ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಆರೋಪಿಸುತ್ತಿದ್ದಾರೆ.

* ಹಲವಾರು ವರ್ಷ ಅನುಭವಸ್ಥರು ಇಲ್ಲಿರುವಾಗ ತನಗೆ ಪ್ರಧಾನಿ ಸ್ಥಾನ ಸಿಗಬೇಕೆಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ನಾನೇ ಪ್ರಧಾನಿ ಎಂದು ಅವರೇ ಘೋಷಿಸಿಕೊಳ್ಳುವುದು ಹೇಗೆ? ಇದು ಅಹಂಕಾರ ಅಲ್ಲದೆ ಮತ್ತೇನು? ಈ ರೀತಿ ಅಪ್ರಬುದ್ಧರಾಗಿರುವವರನ್ನು ದೇಶದ ಜನರು ಸ್ವೀಕರಿಸುತ್ತಾರೆಯೇ? ಮೋದಿಯನ್ನು ಸೋಲಿಸುವುದಕ್ಕಾಗಿ ದೊಡ್ಡ ದೊಡ್ಡ ಸಭೆಗಳನ್ನು ಆಯೋಜಿಸಲಾಗುತ್ತಿದೆ, ಈ ಸಭೆಯಲ್ಲಿ ದಿಢೀರನೆ ಪ್ರಧಾನಿ ಸ್ಥಾನಕ್ಕೆ ರಾಹುಲ್ ಹೆಸರನ್ನು ಸೂಚಿಸಿದಾಗ ಅಲ್ಲಿದ್ದವರ ಪ್ರತಿಕ್ರಿಯೆ ಹೇಗಿರಬಹುದು?

*ಇಲ್ಲಿ ಹಲವಾರು ಪಕ್ಷಗಳು, ಮೈತ್ರಿ ಪಕ್ಷಗಳು, ರಾಜಕಾರಣಿಗಳು ಸರದಿ ಸಾಲಿನಲ್ಲಿದ್ದಾರೆ. ಹೀಗಿರುವಾಗ ರಾಹುಲ್ ಗಾಂಧಿ ತಮ್ಮ ಗುರಿಯನ್ನು ಹೇಳಿಕೊಂಡಿದ್ದಾರೆ. ಇದು ನಾಮ್‍ಧಾರ್‍‍ಗಳ ಜಂಭವನ್ನು ತೋರಿಸುತ್ತಿದೆ.

*ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಾವುಟ ಕಾಣಿಸಿಕೊಳ್ಳುತ್ತಿದ್ದ ದಿನಗಳಿದ್ದವು. ಈಗ ಅದು 400ರಿಂದ 40 ಕ್ಕಿಳಿದಿವೆ. ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಳ್ಳುವುದಾಗಲೀ, ನಿಮ್ಮ ಸಲಹೆಗಳನ್ನು ಸ್ವೀಕರಿಸುವುದಾಗಲೀ ಮಾಡುವುದಿಲ್ಲ. ಈಗ ಅವರು ಸಂಸತ್ತಿನಲ್ಲಿಯೂ ಗದ್ದಲವೆಬ್ಬಿಸುತ್ತಾರೆ.

* ಕಾಂಗ್ರೆಸ್‍ನವರು ದಲಿತರ ಅಥವಾ ದಿಲ್ (ಹೃದಯ) ಪರ ಅಲ್ಲ, ಅವರು ಏನಿದ್ದರೂ ಡೀಲ್ ಪರ.

ನಾನೇನೂ ಡೀಲ್ ಬಗ್ಗೆ  ಹೇಳುತ್ತಿಲ್ಲ. ಆದರೆ ಟಿಕೆಟ್ ಹಂಚಿಕೆ ಹೊತ್ತಲ್ಲಿ ಡೀಲ್ ನಡೆದಿದೆ ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಯವರೇ ಹೇಳಿದ್ದರು. ಕಾಂಗ್ರೆಸ್ ಒಂದು ಕುಟುಂಬದ ಲಾಭಕ್ಕಾಗಿ ಟಿಕೆಟ್‍ ಹಂಚಿ, ಇತರ ಪಕ್ಷದೊಂದಿಗೆ ಕೈ ಜೋಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT