ಅತ್ಯಂತ ವೇಗದ ಆರ್ಥಿಕ ಪ್ರಗತಿ ಕಾಣಲಿದೆ ಭಾರತ: ಐಎಂಎಫ್‌

7

ಅತ್ಯಂತ ವೇಗದ ಆರ್ಥಿಕ ಪ್ರಗತಿ ಕಾಣಲಿದೆ ಭಾರತ: ಐಎಂಎಫ್‌

Published:
Updated:
ಅತ್ಯಂತ ವೇಗದ ಆರ್ಥಿಕ ಪ್ರಗತಿ ಕಾಣಲಿದೆ ಭಾರತ: ಐಎಂಎಫ್‌

ವಿಶ್ವ ಸಂಸ್ಥೆ: 2018ರಲ್ಲಿ ಭಾರತ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಹೊಂದಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಮತ್ತೊಮ್ಮೆ ಹೇಳಿದೆ.

ಆರ್ಥಿಕ ವೃದ್ಧಿ 2018ರಲ್ಲಿ ಶೇ 7.4 ಹಾಗೂ 2019ರ ವೇಳೆಗೆ ಶೇ 7.8ರಷ್ಟು ಆಗಲಿದೆ ಎಂದು ಐಎಂಎಫ್‌ ಏಷ್ಯಾ ಮತ್ತು ಪೆಸಿಫಿಕ್‌ ಪ್ರಾದೇಶಿಕ ಆರ್ಥಿಕ ವರದಿಯಲ್ಲಿ ತಿಳಿಸಿದೆ. ನೋಟು ಅಪಮೌಲ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪರಿಣಾಮಗಳಿಂದ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದಿದೆ.

ದಕ್ಷಿಣ ಏಷ್ಯಾ ಭಾಗದಲ್ಲಿ ಭಾರತದ ನಂತರ ಬಾಂಗ್ಲಾದೇಶ ವೇಗದ ಆರ್ಥಿಕ ಪ್ರಗತಿ ಹೊಂದಲಿರುವ ರಾಷ್ಟ್ರವೆಂದು ಗುರುತಿಸಿದೆ. 2018ರಿಂದ 2019ರ ನಡುವೆ ಶೇ 7 ಏರಿಕೆಯಾಗಲಿದೆ ಎಂದು ಅಂದಾಜಿಸಿದೆ.

ಶ್ರೀಲಂಕಾ 2018ರಲ್ಲಿ ಶೇ 4 ಹಾಗೂ 2019ರಲ್ಲಿ ಶೇ 4.5ರಷ್ಟು ಆರ್ಥಿಕ ವೃದ್ಧಿ ಸಾಧಿಸಲಿದೆ. ನೇಪಾಳ 2018ರಲ್ಲಿ ಶೇ 5 ಹಾಗೂ 2019ರಲ್ಲಿ ಶೇ 4ರಷ್ಟು ಆರ್ಥಿಕ ಪ್ರಗತಿ ಸಾಧಿಸುವುದಾಗಿ ಹೇಳಿದೆ.

ವಿಶ್ವ ಆರ್ಥಿಕತೆಯಲ್ಲಿ ಏಷ್ಯಾ ರಾಷ್ಟ್ರಗಳು ಪ್ರಮುಖ ಪಾತ್ರವಹಿಸಿದೆ. ಒಟ್ಟಾರೆ ಈ ಭಾಗದ ಆರ್ಥಿಕ ಪ್ರಗತಿ ಶೇ 5.6ರಷ್ಟು ಎಂದು ಅಂದಾಜಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry