ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಸರ್ವಸಿದ್ಧತೆ– ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ 976 ಮತಗಟ್ಟೆಗಳ ಸ್ಥಾಪನೆ, 5,861 ಮತಗಟ್ಟೆ ಸಿಬ್ಬಂದಿ
Last Updated 9 ಮೇ 2018, 8:53 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮೇ 12ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಮತದಾನಕ್ಕೆ ಸರ್ವಸಿದ್ಧತೆಗಳು ಪೂರ್ಣಗೊಂಡಿದ್ದು, ಇದಕ್ಕಾಗಿ 976 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

ಚುನಾವಣೆಗಾಗಿ ಒಟ್ಟು 5,861 ಮತಗಟ್ಟೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಬೇಡರಪುರ ಗ್ರಾಮದಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 15ರಂದು ನಡೆಯಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.‌

ಚುನಾವಣಾ ಕಾರ್ಯದ ತರಬೇತಿ ಪಡೆದ ಸಿಬ್ಬಂದಿ ಒಂದು ವೇಳೆ ಚುನಾವಣಾ ಕರ್ತವ್ಯಕ್ಕೆ ಗೈರಾದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 8,30,887 ಮಂದಿ ಮತದಾರರು ಇದ್ದು, ಈ ಪೈಕಿ 8,30,874 ಮಂದಿಗೆ ಭಾವಚಿತ್ರ ಇರುವ ಗುರುತಿನ ಚೀಟಿ ವಿತರಿಸಲಾಗಿದೆ. ಈ ಕಾರ್ಯದಲ್ಲಿ ಒಟ್ಟು ಶೇ 99.60ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಮಸ್ಟರಿಂಗ್ ಕಾರ್ಯವು ಮೇ 11ರಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಲಿದೆ. ಹನೂರು ಕ್ಷೇತ್ರದ ಮಸ್ಟರಿಂಗ್ ಕಾರ್ಯವು ಕೊಳ್ಳೇಗಾಲದ ಸರ್ಕಾರಿ ಎಂಜಿಎಸ್‌ವಿ ಜೂನಿಯರ್ ಕಾಲೇಜಿನಲ್ಲಿ, ಕೊಳ್ಳೇಗಾಲ ಕ್ಷೇತ್ರದ ಮಸ್ಟರಿಂಗ್ ಕಾರ್ಯವು ಕೊಳ್ಳೇಗಾಲದ ಮಹದೇಶ್ವರ ಸರ್ಕಾರ ಪ್ರಥಮದರ್ಜೆ ಕಾಲೇಜಿನಲ್ಲಿ, ಚಾಮರಾಜನಗರ ಕ್ಷೇತ್ರದ್ದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ಗುಂಡ್ಲುಪೇಟೆ ಕ್ಷೇತ್ರದ್ದ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಇದೇ ಸ್ಥಳಗಳಲ್ಲಿ ಡಿ ಮಸ್ಟರಿಂಗ್ ಕಾರ್ಯವೂ ಜರುಗಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಹರೀಶ್‌ಕುಮಾರ್ ಮಾತ ನಾಡಿ, ‘ಜಿಲ್ಲೆಯಲ್ಲಿ 13,085
ಅಂಗವಿಕಲ ಮತದಾರರು ಇದ್ದು, ಅವರಿಗೆ ಅಗತ್ಯ ಇರುವಷ್ಟು ಗಾಲಿಕುರ್ಚಿಗಳನ್ನು ಹಾಗೂ ಮಂದದೃಷ್ಟಿವುಳ್ಳವರಿಗೆ ಭೂತಗಾಜಿನ ಸೌಲಭ್ಯವನ್ನು ಒದಗಿಸಲಾಗಿದೆ.

ಈ ಬಾರಿ ಚುನಾವಣೆಯಲ್ಲಿ 542 ತೃತೀಯ ಲಿಂಗಿಗಳು, 23,018 ಆದಿವಾಸಿಗಳು ಮತದಾರರಿದ್ದಾರೆ. ನಾಲ್ಕು ಮತಗಟ್ಟೆ
ಗಳನ್ನು ವರ್ಣರಂಜಿತವಾಗಿ ಅಲಂಕರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಇತರೆ ಮಾಹಿತಿ

16 ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲು‌. ₹ 62 ಲಕ್ಷ ವಶಕ್ಕೆ

ಜಿಲ್ಲೆಯಲ್ಲಿರುವ 976 ಮತಗಟ್ಟೆಗಳಪೈಕಿ 10 ಮತಗಟ್ಟೆಗಳಿಗೆ ಮೊಬೈಲ್ ಸಂಪರ್ಕ ಸಿಗುವುದಿಲ್ಲ. ಹೀಗಾಗಿ, ಇಲ್ಲಿಗೆ ವೈರ್‌ಲೈಸ್ ಸಂಪರ್ಕ ಸಾಧಿಸಲು ವ್ಯವಸ್ಥೆ ಮಾಡಲಾಗಿದೆ.

200 ಅಬಕಾರಿ ಪ್ರಕರಣ ದಾಖಲು 254 ಆರೋಪಿಗಳ ಬಂಧನ

 ಮೇ 10ರ ಸಂಜೆ 6 ಗಂಟೆಯಿಂದ ಮೇ 12ರ ಮಧ್ಯರಾತ್ರಿಯವರೆಗೆ ಹಾಗೂ ಮೇ 14ರ ಮಧ್ಯರಾತ್ರಿಯಿಂದ 15ರ ಮಧ್ಯರಾತ್ರಿಯವರೆಗೆ ಒಣದಿನಗಳೆಂದು ಘೋಷಣೆ.  ಈ ಅವಧಿಯಲ್ಲಿ ಮದ್ಯಸಾಗಾಣಿಕೆ, ಶೇಖರಣೆ, ಮಾರಾಟ, ಹಂಚಿಕೆ ನಿಷೇಧ

7 ಮಾದರಿ ಮತಗಟ್ಟೆಗಳ ಸ್ಥಾಪನೆ

ಸಖಿ ಮತಗಟ್ಟೆ (ಪಿಂಕ್) ಎಲ್ಲಿ?

ಹನೂರಿನ ಸರ್ಕಾರಿ ಪ್ರಾಥಮಿಕ ಶಾಲೆ, ರಾಮಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳ್ಳೇಗಾಲದ ಮಹದೇಶ್ವರ ಐಟಿಐ ಕಾಲೇಜು, ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆ, ಶ್ರೀಮತಿ ಕಮಲಮ್ಮ ಮತ್ತು ಕರಿಗೆಗೌಡ ಸ್ಮಾರಕ ಸರ್ಕಾರಿ ಪ್ರೌಢಶಾಲೆ, ಚಾಮರಾಜನಗರದ ಉಪ್ಪಾರ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಾಳಿಪುರದ ಬೀಡಿ ಕಾಲೊನಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮೂಡಲ ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಡ್ಲುಪೇಟೆಯ ಶ್ರೀ ಮದ್ದಾನೇಶ್ವರ ಪ್ರೌಢಶಾಲೆ, ಚಿಕ್ಕತು‍ಪ್ಪೂರಿನ  ಸರ್ಕಾರಿ ಸಂಯುಕ್ತ ಶಾಲೆ.

ಎಥ್ನಿಕ್ ಮತಗಟ್ಟೆಗಳು ಎಲ್ಲೆಲ್ಲಿ?

ಹನೂರಿನ ಕೋಣನಕೆರೆಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆ, ಕೊಳ್ಳೇಗಾಲದ ಪುರಾಣಿಪೋಡುವಿನ ಗಿರಿಜನ ಆಶ್ರಮ ಶಾಲೆ, ಚಾಮರಾಜನಗರ ಕೆ.ಗುಡಿಯ ಆಶ್ರಮ ಶಾಲೆ, ಗುಂಡ್ಲುಪೇಟೆಯ ಮದ್ದೂರಿನ ಆಶ್ರಮ ಶಾಲೆ.

‌ಸಾರ್ವಜನಿಕರು ದೂರು ನೀಡುವ ಸಂಖ್ಯೆಗಳು

ಉಚಿತ ದೂರವಾಣಿ ಸಂಖ್ಯೆ 18004250133

ಜಿಲ್ಲಾ ನಿಯಂತ್ರಣ ಸಂಖ್ಯೆ 08226–226007

ವಾಟ್ಸ್‌ಆ್ಯಪ್‌ ಸಂಖ್ಯೆ 9483237191

ಹನೂರು   08224–252280

ಕೊಳ್ಳೇಗಾಲ 08224–253615

ಚಾಮರಾಜನಗರ 08226–222046

ಗುಂಡ್ಲುಪೇಟೆ   08229–222225

**
ಭದ್ರತೆಗಾಗಿ 10 ಕೇಂದ್ರೀಯ ಸಶಸ್ತ್ರ ಪೊಲೀಸ್ ದಳದ ತುಕಡಿಗಳು, ವಿವಿಧ ದರ್ಜೆಯ 1,386 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, 147 ಮಂದಿ ಡಿಎಆರ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ 
– ಧರ್ಮೇಂದ್ರ ಕುಮಾರ್ ಮೀನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT