44 ಶಾಲೆಗಳಿಗೆ ಶೇ 100 ಫಲಿತಾಂಶ

7
ಎಸ್‍ಎಸ್‍ಎಲ್‍ಸಿ: ಜಿಲ್ಲೆಯ ವಿವಿಧ ವಿಭಾಗಗಳಲ್ಲಿ ಬಾಲಕಿಯರೇ ಮೇಲುಗೈ

44 ಶಾಲೆಗಳಿಗೆ ಶೇ 100 ಫಲಿತಾಂಶ

Published:
Updated:

ಚಿತ್ರದುರ್ಗ: ಪ್ರಸಕ್ತ ಸಾಲಿನ 2018 ರ ಏಪ್ರಿಲ್‍ನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಜಿಲ್ಲೆಯ 44 ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.

ಸರ್ಕಾರಿ 11, ಅನುದಾನಿತ 5, ಅನುದಾನ ರಹಿತ 28 ಸೇರಿ ಒಟ್ಟು 44 ಶಾಲೆಗಳು ಶೇ 100 ಫಲಿತಾಂಶ ಪಡೆದ ಶಾಲೆಗಳಾಗಿವೆ. ಸರ್ಕಾರಿ 78, ಅನುದಾನಿತ 73, ಅನುದಾನ ರಹಿತ 95 ಸೇರಿ ಒಟ್ಟು 246 ಶಾಲೆಗಳು ಶೇ 80 ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಶಾಲೆಗಳಾಗಿವೆ.

ವಿಷಯವಾರು ಫಲಿತಾಂಶ

ಬಾಲಕಿಯರೇ ಮೇಲುಗೈ: ಪ್ರಥಮ ಭಾಷೆಯಲ್ಲಿ ಬಾಲಕರು ಶೇ 91.80 ರಷ್ಟು, ಬಾಲಕಿಯರು ಶೇ 95.65 ರಷ್ಟು ಫಲಿತಾಂಶ ಪಡೆದಿದ್ದಾರೆ. ದ್ವಿತೀಯ ಭಾಷೆಯಲ್ಲಿ ಬಾಲಕರು ಶೇ 86.97, ಬಾಲಕಿಯರು ಶೇ 91.09, ತೃತೀಯ ಭಾಷೆಯಲ್ಲಿ ಬಾಲಕರು ಶೇ 91.72, ಬಾಲಕಿಯರು ಶೇ 94.76, ಗಣಿತದಲ್ಲಿ ಬಾಲಕರು ಶೇ 86.26, ಬಾಲಕಿಯರು ಶೇ 89.81, ವಿಜ್ಞಾನದಲ್ಲಿ ಬಾಲಕರು ಶೇ 92.64, ಬಾಲಕಿಯರು ಶೇ 94.25, ಸಮಾಜ ವಿಜ್ಞಾನದಲ್ಲಿ ಬಾಲಕರು ಶೇ 92.53, ಬಾಲಕಿಯರು ಶೇ 94.73 ರಷ್ಟು ಫಲಿತಾಂಶ ಪಡೆದಿದ್ದು, ವಿಷಯವಾರು ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಗ್ರೇಡ್ ಪಡೆದ ಶಾಲೆಗಳು: ಜಿಲ್ಲೆಯಲ್ಲಿ ಗ್ರೇಡ್ ಪಡೆದ ಶಾಲೆಗಳ ಸಂಖ್ಯೆ ಈ ರೀತಿ ಇದೆ. ಉತ್ತೀರ್ಣರಾದ ಒಟ್ಟು 16491 ವಿದ್ಯಾರ್ಥಿಗಳಲ್ಲಿ 800 ವಿದ್ಯಾರ್ಥಿಗಳು ‘ಎ+’, 2926 ‘ಎ’, 4425 ‘ಬಿ+’, 4670 ‘ಬಿ’, 3155 ‘ಸಿ+’ ಹಾಗೂ 515 ವಿದ್ಯಾರ್ಥಿಗಳು ‘ಸಿ’ ಗ್ರೇಡ್ ವಿದ್ಯಾರ್ಥಿಗಳಾಗಿದ್ದಾರೆ.

ಎಸ್ಸಿ, ಎಸ್ಟಿ; ಬಾಲಕಿಯರೇ ಮೇಲುಗೈ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡ 2544 ಬಾಲಕರ ಪೈಕಿ 1907 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 74.96 ಫಲಿತಾಂಶ ಲಭಿಸಿದೆ. 2525 ಬಾಲಕಿಯರ ಪೈಕಿ 2023 ವಿದ್ಯಾರ್ಥಿನಿಯರು ಶೇ 80.12 ಫಲಿತಾಂಶ ಪಡೆದುಕೊಂಡಿದ್ದಾರೆ.

ಪರಿಶಿಷ್ಟ ಪಂಗಡ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡ 1933 ಬಾಲಕರ ಪೈಕಿ 1474 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 76.25 ಫಲಿತಾಂಶ ಲಭಿಸಿದೆ. 1796 ಬಾಲಕಿಯರ ಪೈಕಿ 1507 ವಿದ್ಯಾರ್ಥಿನಿಯರು ಶೇ 83.91 ಫಲಿತಾಂಶ ಪಡೆದಿದ್ದು, ಇದರಲ್ಲೂ ಸಹ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ತಾಲ್ಲೂಕುವಾರು ಬಾಲಕಿಯರೇ ಮೇಲುಗೈ: ತಾಲ್ಲೂಕುವಾರು ಫಲಿತಾಂಶದಲ್ಲಿ ಕಳೆದ ಬಾರಿ ಜಿಲ್ಲೆಗೆ ಮೂರನೇ ಸ್ಥಾನದಲ್ಲಿದ್ದ ಚಳ್ಳಕೆರೆ ಈ ಬಾರಿ ಶೇ 87.89 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ 28ನೇ ಸ್ಥಾನದಲ್ಲಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಶೇ 90.18, ಮೊಳಕಾಲ್ಮುರು ಶೇ 87.16, ಹೊಳಲ್ಕೆರೆ ಶೇ 87.73, ಚಿತ್ರದುರ್ಗ ಶೇ 80.14, ಹಿರಿಯೂರು ಶೇ 80.93, ಹೊಸದುರ್ಗ ಶೇ 80.31 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯ ಆರೂ ತಾಲ್ಲೂಕುಗಳ ಶೇಕಡಾವಾರು ಫಲಿತಾಂಶದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಒಂದು ಶಾಲೆಗೆ ಶೂನ್ಯ ಫಲಿತಾಂಶ

ಖಾಸಗಿ ಅನುದಾನ ರಹಿತ ಒಂದು ಶಾಲೆ ಜಿಲ್ಲೆಯಲ್ಲಿ ಶೂನ್ಯ ಫಲಿತಾಂಶ ಪಡೆದಿದೆ. ಚಿತ್ರದುರ್ಗ ತಾಲ್ಲೂಕಿನ ಸೀಬಾರ ಗುತ್ತಿನಾಡು ಸಮೀಪದ ನವೀನ್ ಪ್ರೌಢಶಾಲೆ ಶೂನ್ಯ ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ, ಶಿಕ್ಷಣ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಡಿಡಿಪಿಐ ಅಂಥೋಣಿ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

**

ವಿವಿಧ ವಿಭಾಗಗಳಲ್ಲಿ ಬಾಲಕಿಯರು ಮೇಲುಗೈ ಸಾಧಿಸಿರುವುದು ಶ್ಲಾಘನೀಯ. ಅದೇ ರೀತಿ ಮುಂಬರುವ ದಿನಗಳಲ್ಲಿ ಬಾಲಕರು ಕೂಡ ಮೇಲುಗೈ ಸಾಧಿಸಲು ಶ್ರಮಿಸಬೇಕು

- ಅಂಥೋಣಿ, ಡಿಡಿಪಿಐ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry