ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ವಿದ್ಯಾರ್ಥಿಗಳದ್ದೇ ಮೇಲುಗೈ

Last Updated 9 ಮೇ 2018, 9:58 IST
ಅಕ್ಷರ ಗಾತ್ರ

ದಾವಣಗೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 18 ಸರ್ಕಾರಿ ಶಾಲೆಗಳು, 8 ಅನುದಾನಿತ, 21 ಅನುದಾನ ರಹಿತ, ಒಟ್ಟು 47 ಶಾಲೆಗಳು 100 ಫಲಿತಾಂಶ ಪಡೆದಿವೆ.

ಗ್ರಾಮೀಣ ಪ್ರದೇಶದಲ್ಲಿ 14,728 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12,355 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 83.89 ಫಲಿತಾಂಶ ಬಂದಿದೆ. ನಗರ ಪ್ರದೇಶದ 9,004 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7,126 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 79.14 ರಷ್ಟು ಫಲಿತಾಂಶ ಬಂದಿದೆ.

ಆಂಜನೇಯ ಪ್ರೌಢಶಾಲೆ:
ದಾವಣಗೆರೆ ತಾಲ್ಲೂಕು ಯರಗುಂಟೆ ಹೊಸ ಬಡಾವಣೆಯ ಆಂಜನೇಯ ಅನುದಾನಿತ ಪ್ರೌಢಶಾಲೆಗೆ ಶೇ 82 ಫಲಿತಾಂಶ ಬಂದಿದೆ. ಇಬ್ಬರು ಉನ್ನತ ದರ್ಜೆ, ಆರು ವಿದ್ಯಾರ್ಥಿಗಳು ಪ್ರಥಮ, ಎಂಟು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಭಾಷಾ ವಿಷಯದಲ್ಲಿ ವಿ.ಟಿ.ಆರ್‌. ಪಲ್ಲವಿ 125ಕ್ಕೆ 124, ಜಿ.ಕೆ. ಲೋಹಿತ್ 122, ಆಸ್ಮಾಬಾನು 121 ಅಂಕ ಪಡೆದಿದ್ದಾರೆ. ಶಾಲೆಯ ಕಾರ್ಯದರ್ಶಿ ಜಿ.ಟಿ. ತಿಮ್ಮಪ್ಪ, ಮುಖ್ಯ ಶಿಕ್ಷಕಿ ಎಲ್‌.ಕೆ.ಠಾಕ್ರಾನಾಯ್ಕ್ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಚಿಕ್ಕಮೇಗಳಗೆರೆ ದುರ್ಗಾಂಬಿಕಾ ಪ್ರೌಢಶಾಲೆಗೆ ಶೇ 81.81:
ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮೇಗಳಗೆರೆ ದುರ್ಗಾಂಬಿಕಾ ಪ್ರೌಢಶಾಲೆಗೆ ಎಸ್ಎಸ್‌ಎಲ್‌ಸಿಯಲ್ಲಿ ಶೇ 81.81 ಫಲಿತಾಂಶ ಬಂದಿದೆ. 55 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 5 ಉನ್ನತ, 37 ಪ್ರಥಮ, 3 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕೆ.ಪಿ. ಅರ್ಪಿತ 570, ಬಿ.ಕೆ. ಉಮಾ 561, ಸಿ.ಆರ್‌. ಅಶ್ವಿನಿ 553, ಸಿ.ಜಿ. ಶ್ವೇತ 548, ಎಸ್‌. ಪ್ರದೀಪ್ 536 ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಉಷಾ ಕಾಶೀನಾಥ್, ವೈ. ಕಾಶೀನಾಥ್ ಅಭಿನಂದನೆ ಸಲ್ಲಿಸಿದ್ದಾರೆ.

ಗುಂಡಗತ್ತಿ ವೆಂಕಟೇಶ್ವರ ಪ್ರೌಢಶಾಲೆಗೆ ಶೇ 84.78:
ಹರಪನಹಳ್ಳಿ ತಾಲ್ಲೂಕು ಗುಂಡಗತ್ತಿಯ ವೆಂಕಟೇಶ್ವರ ಪ್ರೌಢಶಾಲೆಗೆ ಎಸ್‌ಎಸ್ಎಲ್‌ಸಿಯಲ್ಲಿ ಶೇ 84.78 ಫಲಿತಾಂಶ ಬಂದಿದೆ. 46 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1 ಉನ್ನತ, 27 ಪ್ರಥಮ, 10 ದ್ವಿತೀಯ, 1 ತೃತೀಯ ಸ್ಥಾನ ಪಡೆದಿದ್ದಾರೆ. ಎಸ್‌.ಜ್ಯೋತಿ 551, ಎಸ್. ನಾಗರಾಜ 507 ಅಂಕ ಪಡೆದಿದ್ದಾರೆ.

ಕಿವುಡ ಮತ್ತು ಮೂಕ ಮಕ್ಕಳ ಶಾಲೆಗೆ ಶೇ 78

ದಾವಣಗೆರೆ ನಗರದ ಡಿಸಿಎಂ ಟೌನ್‌ಶಿಫ್‌ನ ಶ್ರೀಮೌನೇಶ್ವರಿ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 78 ಫಲಿತಾಂಶ ಬಂದಿದೆ.

ವಿದ್ಯಾರ್ಥಿಗಳು ಕಿವುಡ ಮತ್ತು ಮೂಕರಾಗಿರುವುದರಿಂದ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿನಾಯ್ತಿ ಇರುತ್ತದೆ. ಆದ್ದರಿಂದ ಇವರು 425 ಅಂಕಗಳಿಗೆ ಮಾತ್ರ ಪರೀಕ್ಷೆ ಬರೆದಿರುತ್ತಾರೆ.

ಎಚ್‌.ಪವನ್‌ ಶೇ 65.6 (279) ಅಂಕ ಪಡೆದು ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾನೆ. ಬಿ. ನಾಗವೇಣಿ ಶೇ 65.17 (277), ಆರ್‌. ಪವನ್‌ ಶೇ 65.17 (277) ಇಬ್ಬರೂ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

41 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 32 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7 ಪ್ರಥಮ, 6 ದ್ವಿತೀಯ ಹಾಗೂ 9 ತೃತೀಯ ಶ್ರೇಣಿ ಪಡೆದಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT