ಉತ್ತರ ಭಾರತದಲ್ಲಿ ಭೂಕಂಪ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ, ದೆಹಲಿ, ಗುರುಗ್ರಾಮ ಸೇರಿದಂತೆ ಉತ್ತರ ಭಾರತದ ವಿವಿಧೆಡೆ ಇಂದು ಮಧ್ಯಾಹ್ನ ಭೂಮಿ ನಡುಗಿದೆ. ಭೂಕಂಪದ ತೀವ್ರತೆ ಮತ್ತು ಅನಾಹುತಗಳು ಆಗಿವೆಯೇ ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಅಘ್ಗಾನಿಸ್ತಾನದ ಹಿಂದುಖುಷ್ ಪರ್ವತಗಳಲ್ಲಿ ಭೂಕಂಪದ ಕೇಂದ್ರ ಇತ್ತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.5ರಷ್ಟು ದಾಖಲಾಗಿದೆ. ಸಾವುನೋವು ಮತ್ತು ಆಸ್ತಿಹಾನಿಯ ಮಾಹಿತಿ ಲಭ್ಯವಾಗಿಲ್ಲ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿಯೂ ಭೂಮಿ ನಡುಗಿದೆ. ಕ್ಯಾಲಿಫೋರ್ನಿಯಾದ ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.5 ಎಂದು ದಾಖಲಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.